ಕುಮಟಾ: ಕೋಳಿ ಶೆಡ್‌ಗೆ ಬಂದ ಹೆಬ್ಬಾವನ್ನು ಹೊಡೆಯಲು ಬಳಸಿದ ನಾಡ ಬಂದೂಕಿನಿಂದ ಸಿಡಿದ ಗುಂಡು ವಾಪಸ್ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ತಾಲ್ಲೂಕಿನ ಅಳಕೋಡ ಗ್ರಾಮ ಪಂಚಾಯಿತಿಯ ಕತಗಾಲ ಸಮೀಪದ ಮೂಡಗೊಳಿಯಲ್ಲಿ ಶನಿವಾರ ನಸುಕಿನಲ್ಲಿ ನಡೆದಿದೆ.
‘ಪ್ರಥಮ ನಾಯ್ಕ (32) ಮೃತರು. ಪರವಾನಗಿ ಇಲ್ಲದೇ ನಾಡ ಬಂದೂಕು ತಯಾರಿಸಿ, ಬಳಸುತ್ತಿದ್ದರು. ಘಟನೆ ಸಂಬಂಧ ನಾಡಬಂದೂಕು ಅಡಗಿಸಿ ಇಡುವುದರ ಜೊತೆಗೆ ಅವರ ದೇಹಕ್ಕೆ ಸಿಡಿದ ಗುಂಡನ್ನು ಹಳ್ಳಕ್ಕೆ ಎಸೆದ ಆರೋಪದ ಮೇಲೆ ಮೃತರ ಸಹೋದರಿ ರಂಜನಾ ಗೋಕಲೆ (35), ಮೂಡಗೋಳಿ ಗ್ರಾಮಸ್ಥ ರಾಮ ದೇಶಭಂಡಾರಿ (51) ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಕುಮಟಾ ಠಾಣೆ ಪೊಲೀಸರು ತಿಳಿಸಿದ್ದಾರೆ.
‘ಪ್ರಥಮ್ ದೇಹಕ್ಕೆ ಸಿಡಿದು ಬಿದ್ದಿದ್ದ ಗುಂಡು ಮತ್ತು ಅನಧಿಕೃತ ನಾಡಬಂದೂಕನ್ನು ಅಡಗಿಸಲು ರಂಜನಾ ಹಾಗೂ ರಾಮ ದೇಶಭಂಡಾರಿ ಪ್ರಯತ್ನಿಸಿದ್ದರು. ಇವರಿಬ್ಬರ ಜತೆಗೆ ಅನಧಿಕೃತವಾಗಿ ನಾಡಬಂದೂಕು ತಯಾರಿಸಿದ್ದ ಮೃತ ವ್ಯಕ್ತಿಯ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪಿಎಸ್‌ಐ ರವಿ ಗುಡ್ಡಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.