ADVERTISEMENT

ಅರೆಬರೆ ಕಾಮಗಾರಿಗೆ ಗ್ರಾಮಸ್ಥರ ಆಕ್ರೋಶ

ಶಿರವಾಡದಲ್ಲಿ ತರಾತುರಿಯಲ್ಲಿ ಮೀಟರ್ ಬೋರ್ಡ್ ಅಳವಡಿಕೆಯ ಆರೋಪ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 11:47 IST
Last Updated 19 ಮಾರ್ಚ್ 2019, 11:47 IST
ಕಾರವಾರ ತಾಲ್ಲೂಕಿನ ಶಿರವಾಡ ಗ್ರಾಮದಲ್ಲಿ ವಿದ್ಯುತ್ ಮೀಟರ್ ಅಳವಡಿಕೆ ಕೆಲಸ ಅಪೂರ್ಣವಾಗಿದೆ.
ಕಾರವಾರ ತಾಲ್ಲೂಕಿನ ಶಿರವಾಡ ಗ್ರಾಮದಲ್ಲಿ ವಿದ್ಯುತ್ ಮೀಟರ್ ಅಳವಡಿಕೆ ಕೆಲಸ ಅಪೂರ್ಣವಾಗಿದೆ.   

ಕಾರವಾರ:ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ನೀಡುವ ಕೇಂದ್ರ ಸರ್ಕಾರದ ‘ದೀನದಯಾಳ್ ಉಪಾಧ್ಯಾಯ ಗ್ರಾಮೀಣ ವಿದ್ಯುದೀಕರಣ ಯೋಜನೆ’ಯ ಜಾರಿ ಸಮರ್ಪಕವಾಗಿ ಆಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ತಾಲ್ಲೂಕಿನ ಶಿರವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿಮೀಟರ್ ಅಳವಡಿಕೆ ಅರೆಬರೆಯಾಗಿ ಮಾಡಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ವಿದ್ಯುತ್ ತಂತಿ ಎಳೆಯುವಗುತ್ತಿಗೆಯನ್ನುಬಜಾಜ್ ಸಂಸ್ಥೆ ಹಾಗೂ ಡಿಜಿಟಲ್ ಮೀಟರ್ ಬೋರ್ಡ್ ಅಳವಡಿಕೆಯ ಜವಾಬ್ದಾರಿಯನ್ನು ಆರ್‌ಎಂಸಿ ಸಂಸ್ಥೆಪಡೆದುಕೊಂಡಿವೆ. ಇನ್ನೂ ಹಲವು ತಾಲ್ಲೂಕುಗಳಲ್ಲಿ ವಿದ್ಯುತ್ ತಂತಿ ಎಳೆದಾಗಿಲ್ಲ. ಅಲ್ಲದೇ ಹಳೆಯ ಮೀಟರ್ ಬದಲಿಸಿ ಹೊಸದನ್ನು ಅಳವಡಿಸುವ ಕಾರ್ಯವೂ ಅಪೂರ್ಣವಾಗಿದೆ. ಆದರೆ, ಈಗ ಚುನಾವಣೆ ಸಮೀಪಿಸುತ್ತಿರುವ ಕಾರಣ ತರಾತುರಿಯಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಹಳೆಯ ಮೀಟರ್ ಇದ್ದ ಜಾಗದ ಕೆಳಭಾಗದಲ್ಲೇಹೊಸದನ್ನುಅಳವಡಿಸಿದ್ದಾರೆ. ಇದು ಮಕ್ಕಳ ಕೈಗೂ ಸಿಗುವಂತಿದ್ದು, ಅಪಾಯವಾದರೆ ಯಾರು ಹೊಣೆ ಎಂಬುದು ಜನರ ಪ್ರಶ್ನೆಯಾಗಿದೆ. ಕೆಲವು ಮನೆಗಳಲ್ಲಿ ಮೀಟರ್‌ನ ವಿದ್ಯುತ್ ತಂತಿಯನ್ನು ತೆರೆದಿಡಲಾಗಿದೆ.ಸೂಕ್ತ ಸ್ಥಳದಲ್ಲಿಮೀಟರ್ಅಳವಡಿಸಿ ಎಂದು ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂಬ ದೂರು ಶಿರವಾಡದ ನಾರಗೇರಿ ಪ್ರದೇಶದ ಜನರದ್ದಾಗಿದೆ.

ADVERTISEMENT

ಯೋಜನೆಯಡಿ ವಿದ್ಯುದೀಕರಣ ಕೆಲಸವನ್ನು ಮಾರ್ಚ್ ತಿಂಗಳಒಳಗಾಗಿ ಮುಕ್ತಾಯಗೊಳಿಸಬೇಕು ಎಂದುಕೇಂದ್ರ ಸಚಿವ ಅನಂತಕುಮಾರ್ ಹೆಗಡೆಕೆಲವು ತಿಂಗಳ ಹಿಂದೆಹಮ್ಮಿಕೊಂಡಿದ್ದ ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಇದೀಗ ಮಾರ್ಚ್ ತಿಂಗಳ ಮಧ್ಯಭಾಗ ಕಳೆದಿದ್ದು, ತರಾತುರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕೆಲಸ ಮಾಡಲಾಗುತ್ತಿದೆ ಎಂಬ ದೂರು ಗ್ರಾಮಸ್ಥರದ್ದಾಗಿದೆ.

‘ಸೂಚನೇ ನೀಡದೇ ಕಾಮಗಾರಿ’: ‘ಕೆಲವು ಮನೆಗಳಲ್ಲಿ ಯಾವುದೇ ಸೂಚನೆ ನೀಡದೇ ಬಂದ ಗುತ್ತಿಗೆದಾರ ಸಂಸ್ಥೆಯವರು, ಮನೆ ಮಾಲೀಕರಿಲ್ಲದಿದ್ದಾಗ ಬಂದು ಮೀಟರ್ ಅಳವಡಿಸಿದ್ದಾರೆ. ಕೆಲವು ಮನೆಗಳಿಂದಹಣವನ್ನೂ ವಸೂಲಿ ಮಾಡಿದ್ದಾರೆ. ವಿದ್ಯುತ್ ಮೀಟರ್ ಅಳವಡಿಕೆಯ ಸಂದರ್ಭ ಹೆಸ್ಕಾಂನ ಸಿಬ್ಬಂದಿ ಕೂಡ ಜೊತೆಗಿರಲಿಲ್ಲ. ಕೆಲವು ಮನೆಗಳಲ್ಲಿ ಅರೆಬರೆ ಕೆಲಸ ಮಾಡಿದ್ದರೆ, ಮತ್ತೆ ಕೆಲವು ಕಡೆ ಮನೆಯ ಬಾಗಿಲಿನ ಸಮೀಪದಲ್ಲೇ ಮೀಟರ್ ಬೋರ್ಡ್ ಅಳವಡಿಸಿದ್ದಾರೆ’ ಎಂದು ಶಿರವಾಡ ಗ್ರಾಮ ಪಂಚಾಯ್ತಿ ಸದಸ್ಯಗಜಾನನ ಬಾಂದೇಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.