ADVERTISEMENT

ಅನಿಲ್ ಮಡಿವಾಳಗೆ ‘ವರ್ಲ್ಡ್ ಜೀನಿಯಸ್ ರೆಕಾರ್ಡ್’ ಗೌರವ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 16:16 IST
Last Updated 5 ಸೆಪ್ಟೆಂಬರ್ 2022, 16:16 IST
ಕಾರವಾರದ ನಿವೃತ್ತ ಚಿತ್ರಕಲಾ ಶಿಕ್ಷಕ ಅನಿಲ್ ಸುಬ್ರಾಯ ಮಡಿವಾಳ, ನೈಜೀರಿಯಾ ದೇಶದ ‘ವರ್ಲ್ಡ್ ಜೀನಿಯಸ್ ರೆಕಾರ್ಡ್’ ಸಂಸ್ಥೆಯ ಗೌರವಕ್ಕೆ ಭಾಜನರಾಗಿದ್ದಾರೆ.
ಕಾರವಾರದ ನಿವೃತ್ತ ಚಿತ್ರಕಲಾ ಶಿಕ್ಷಕ ಅನಿಲ್ ಸುಬ್ರಾಯ ಮಡಿವಾಳ, ನೈಜೀರಿಯಾ ದೇಶದ ‘ವರ್ಲ್ಡ್ ಜೀನಿಯಸ್ ರೆಕಾರ್ಡ್’ ಸಂಸ್ಥೆಯ ಗೌರವಕ್ಕೆ ಭಾಜನರಾಗಿದ್ದಾರೆ.   

ಕಾರವಾರ: ನಗರದ ನಿವೃತ್ತ ಚಿತ್ರಕಲಾ ಶಿಕ್ಷಕ ಅನಿಲ್ ಸುಬ್ರಾಯ ಮಡಿವಾಳ, ‘ವರ್ಲ್ಡ್ ಜೀನಿಯಸ್ ರೆಕಾರ್ಡ್’ ಸಂಸ್ಥೆಯ ಗೌರವಕ್ಕೆ ಭಾಜನರಾಗಿದ್ದಾರೆ. ಸಂಸ್ಥೆಯು ಪ್ರಮಾಣಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದೆ.

ಇದು ನೈಜೀರಿಯಾ ದೇಶದ ಸಂಸ್ಥೆಯಾಗಿದ್ದು, ಭಾರತ ಘಟಕದಿಂದ ಗೌರವ ಪ್ರದಾನ ಮಾಡಲಾಗಿದೆ. ನಗರದ ಸೇಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದ ಅವರು, ಸುಮಾರು 36 ವರ್ಷ ಕರ್ತವ್ಯ ನಿರ್ವಹಿಸಿದ್ದರು. ಅಲ್ಲದೇ ಎನ್.ಸಿ.ಸಿ ನೌಕಾ ಘಟಕದ ಅಧಿಕಾರಿಯಾಗಿಯೂ 27 ವರ್ಷ ಜವಾಬ್ದಾರಿ ನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT