ADVERTISEMENT

ಅಂಕೋಲಾ: ಉಪ್ಪಿನ ಸತ್ಯಾಗ್ರಹ ನೆನಪಿಗೆ ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 14:29 IST
Last Updated 14 ಏಪ್ರಿಲ್ 2025, 14:29 IST
ಉಪ್ಪಿನ ಸತ್ಯಾಗ್ರಹಕ್ಕೆ ನೂರು ವರ್ಷ ತುಂಬಿದ ನೆನಪಿಗಾಗಿ ಅಂಕೋಲಾದ ಪೂಜಗೇರಿ ಹಳ್ಳಕ್ಕೆ ಭಾನುವಾರ ಗೆಳೆಯರ ಬಳಗದ ವತಿಯಿಂದ ಬಾಗಿನ ಅರ್ಪಿಸಲಾಯಿತು
ಉಪ್ಪಿನ ಸತ್ಯಾಗ್ರಹಕ್ಕೆ ನೂರು ವರ್ಷ ತುಂಬಿದ ನೆನಪಿಗಾಗಿ ಅಂಕೋಲಾದ ಪೂಜಗೇರಿ ಹಳ್ಳಕ್ಕೆ ಭಾನುವಾರ ಗೆಳೆಯರ ಬಳಗದ ವತಿಯಿಂದ ಬಾಗಿನ ಅರ್ಪಿಸಲಾಯಿತು   

ಅಂಕೋಲಾ: ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಉಪ್ಪಿಗೆ ಕರ ಕೊಡುವುದನ್ನು ವಿರೋಧಿಸಿ ಪೂಜಗೇರಿಯಲ್ಲಿ ಕೈಗೊಂಡ ಸತ್ಯಾಗ್ರಹಕ್ಕೆ ನೂರು ವರ್ಷ ತುಂಬಿದ ಕಾರಣ ಗೆಳೆಯರ ಬಳಗದ ಆಶ್ರಯದಲ್ಲಿ ಚಿಂತಕರು, ಲೇಖಕರು ಪೂಜಗೇರಿಯಲ್ಲಿ ಭಾನುವಾರ ಬಾಗಿನ ಅರ್ಪಣೆ ಮಾಡಿದರು.‌

ಚಿಂತಕ ಕಾಳಪ್ಪ ನಾಯಕ, ನಾಟಿ ವೈದ್ಯ ಹನುಮಂತ ಗೌಡ, ಸಾಹಿತಿಗಳಾದ ಮೋಹನ ಹಬ್ಬು, ಶಾಂತಾರಾಮ ನಾಯಕ, ರಾಮಕೃಷ್ಣ ಗುಂದಿ, ಮಹಾಂತೇಶ್ ರೇವಡಿ ಮಾತನಾಡಿದರು.

ನಾಗರಾಜ ಮಂಜುಗುಣಿ, ಜಿ.ಆರ್. ತಾಂಡೇಲ್, ಉಮೇಶ್ ಎನ್. ನಾಯ್ಕ, ವಿಲಾಸ ನಾಯಕ, ರಾಜೇಶ್ ಮಿತ್ರ ನಾಯ್ಕ, ರಾಜು ಹರಿಕಂತ್ರ, ಶಿಕ್ಷಕ ಜಗದೀಶ್ ನಾಯಕ ಹೊಸ್ಕೇರಿ, ಸಂದೀಪ್ ಬಂಟ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.