ಅಂಕೋಲಾ: ತಾಲ್ಲೂಕಿನ ಕೊಗ್ರೆಯ ಬಂಡಿ ಹಬ್ಬವು ಶನಿವಾರ, ಸಹಸ್ರಾರು ಭಕ್ತರ ನಡುವೆ ಸಂಭ್ರಮದಿಂದ ನಡೆಯಿತು.
ಬೊಮ್ಮಯ್ಯ ದೇವ, ಮಾಣಿಬೀರ, ಉಲಿಬೀರ ಮತ್ತು ಅಮ್ಮನವರ ಕಳಸ ಹೊತ್ತ ಗುನಗರು, ಈ ಹಬ್ಬದಂದು ಗುಡ್ಡದ ತುದಿಯಲ್ಲಿರುವ ಬೊಮ್ಮಯ್ಯ ದೇವಸ್ಥಾನದ 200ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಏರಿಳಿದರು. ಆಡುಕಟ್ಟೆ ಮಾರ್ಗವಾಗಿ ಸಾಗಿದ ಸೂರ್ವೆಯ ಬೀರದೇವ ಮತ್ತು ಅಮ್ಮನವರ ದೇವಸ್ಥಾನದ ಎದುರಿನ ಉರಿಚಪ್ಪರಗಂಬದಲ್ಲಿ ದೇವರ ನಾಲ್ಕು ಕಳಸಗಳು ವಿರಾಜಮಾನವಾದವು.
ಕೊಗ್ರೆ, ಬಾಸಗೋಡ, ಸೂರ್ವೆ, ಶೆಟಗೇರಿ, ಶಿಂಗನಮಕ್ಕಿ, ಶೀಳ್ಯ, ಕಣಗೀಲ, ತಾಳೆಬೈಲ್ ಗ್ರಾಮದ ಶಕ್ತಿ ದೇವತೆಯ ಆರಾಧನಾ ಮಹೋತ್ಸವವೇ ಕೊಗ್ರೆ ಬಂಡಿ ಹಬ್ಬವಾಗಿದೆ. ಹೊರರಾಜ್ಯದಲ್ಲಿ ನೆಲೆಸಿರುವ ಗ್ರಾಮಗಳ ನಿವಾಸಿಗಳು ಸಹ ಊರಿಗೆ ಆಗಮಿಸಿ ಹಬ್ಬ ಆಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.