ಸಿದ್ದಾಪುರ: ತಾಲ್ಲೂಕಿನ ಬಾಳೇಸರ-ಬಾಳೂರು-ಸಾಗರದ ಸಿದ್ಧಿವಿನಾಯಕ ಸಂಗೀತ ವಿದ್ಯಾಲಯದ 18ನೇ ವಾರ್ಷಿಕೋತ್ಸವ ಈಚೆಗೆ ಬಾಳೇಸರ ಶಾಲಾ ಆವರಣದಲ್ಲಿ ನಡೆಯಿತು.
ಬಾಳೇಸರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಕಲಾವತಿ ಹೆಗಡೆ ವಾರ್ಷಿಕೋತ್ಸವ ಉದ್ಘಾಟಿಸಿದರು.
ನಾಗಪತಿ ಭಟ್ಟ ಮಿಳಗಾರ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಉಮಾಮಹೇಶ್ವರ ಭಟ್ಟ, ರಶ್ಮಿ ವಿನಾಯಕ ಹೆಗಡೆ, ಅಶೋಕ ಹೆಗಡೆ ಶಮೇಮನೆ ಇದ್ದರು. ಸಂಗೀತ ಶಿಕ್ಷಕ ರಾಮಚಂದ್ರ ಹೆಗಡೆ ತಂಗಾರಮನೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಮೇಶ ಹೆಗಡೆ ಮಿಳಗಾರ ಕಾರ್ಯಕ್ರಮ ನಿರ್ವಹಿಸಿದರು. ಸಂಗೀತ ಶಾಲೆಯ 38 ವಿದ್ಯಾರ್ಥಿಗಳಿಂದ ಸಂಗೀತ ಕಚೇರಿ ನಡೆಯಿತು. ಸಂಗೀತ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಮಾಣ ಪತ್ರ ವಿತರಿಸಿದರು.
ನಂತರ ವಿನಾಯಕ ಹೆಗಡೆ ಮುತ್ತಮುರುಡು ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ಮಹೇಶ ಹೆಗಡೆ ಹೊಸಗದ್ದೆ, ಹಾರ್ಮೋನಿಯಂನಲ್ಲಿ ಭರತ್ ಹೆಗಡೆ ಹೆಬ್ಬಲಸು, ತಂಬೂರದಲ್ಲಿ ರಶ್ಮಿ ಹೆಗಡೆ ಚಿಟಮಾವು ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.