ADVERTISEMENT

ಜೊಯಿಡಾ | ರಾಮನಗರದಲ್ಲಿ ಯೋಧ ಶಶಿಕಾಂತ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 6:19 IST
Last Updated 1 ಆಗಸ್ಟ್ 2025, 6:19 IST
ಜೊಯಿಡಾದ ರಾಮನಗರದಲ್ಲಿ ಮೃತಯೋಧ ಶಶಿಕಾಂತ ಗೋಸಾವಿ ಅವರ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು 
ಜೊಯಿಡಾದ ರಾಮನಗರದಲ್ಲಿ ಮೃತಯೋಧ ಶಶಿಕಾಂತ ಗೋಸಾವಿ ಅವರ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು    

ಜೊಯಿಡಾ:  ತಾಲ್ಲೂಕಿನ ರಾಮನಗರದ ಯೋಧ ಶಶಿಕಾಂತ ಕೃಷ್ಣಾ ಗೋಸಾವಿ ಅವರು ಬುಧವಾರ ಅನಾರೋಗ್ಯದಿಂದ ಪಂಜಾಬಿನಲ್ಲಿ ಮೃತಪಟ್ಟಿದ್ದು, ಸ್ವಗೃಹ ರಾಮನಗರದಲ್ಲಿ ಗುರುವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಪಂಜಾಬಿನಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದ ಶಶಿಕಾಂತ, ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.  ಸುಮಾರು 24 ವರ್ಷಗಳಿಂದ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಶಶಿಕಾಂತ ಆರು ತಿಂಗಳಲ್ಲಿ ನಿವೃತ್ತಿಯಾಗಲಿದ್ದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ತಾಯಿ ಇದ್ದಾರೆ.

ADVERTISEMENT

ಪಾರ್ಥಿವ ಶರೀರವನ್ನು ಗುರುವಾರ ಬೆಳಿಗ್ಗೆ ಸ್ವಗೃಹ ರಾಮನಗರಕ್ಕೆ ತರಲಾಯಿತು. ರಾಮನಗರದ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮೆರವಣಿಗೆಯಲ್ಲಿ ಮಾಜಿ ಶಾಸಕ ಸುನಿಲ್ ಹೆಗಡೆ, ಬಿಜೆಪಿ ತಾಲ್ಲೂಕು ಘಟಕದ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ನೂರಾರು ಸಾರ್ವಜನಿಕರು ಸೇರಿದ್ದರು. ಗುರುವಾರ ರಾಮನಗರದಲ್ಲಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮೃತ ಸೈನಿಕನಿಗೆ ಗೌರವ ಸೂಚಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.