ADVERTISEMENT

ಭಗವದ್ಗೀತೆ ಅಭಿಯಾನ: ಫಲಿತಾಂಶ ಪ್ರಕಟ

ಸೋಂದಾ ಸ್ವರ್ಣವಲ್ಲೀ ಮಠ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 16:33 IST
Last Updated 22 ಡಿಸೆಂಬರ್ 2021, 16:33 IST

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಠದ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಭಗವದ್ಗೀತಾ ಅಭಿಯಾನದ ಅಂಗವಾಗಿ ನಡೆದ ರಾಜ್ಯ‌ಮಟ್ಟದ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.

ಜಿಲ್ಲಾವಾರು ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರಿಗೆ ಆನ್‌ಲೈನ್‌ ಮೂಲಕ ರಾಜ್ಯಮಟ್ಟದ ಸ್ಪರ್ಧೆ ನಡೆಯಿತು. ಐದು, ಆರು ಏಳ‌ನೇ ತರಗತಿಯ ವಿದ್ಯಾರ್ಥಿಗಳಿಗೆ‌ ಕರ್ಮ, ಭಕ್ತಿ, ಜ್ಞಾನ ಗಣದಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಯಿತು. ಪ್ರಥಮದಿಂದ ಐದು ಸ್ಥಾನಗಳನ್ನು ಅವರು ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ವಿಜೇತರ ವಿವರ ಇಂತಿದೆ:

ಕಂಠಪಾಠ ಸ್ಪರ್ಧೆ: ಯಲ್ಲಾಪುರದ ಬೀಸಗೋಡ ಹಿರಿಯ ಪ್ರಾಥಮಿಕ ಶಾಲೆಯ ಚಿನ್ಮಯ ಆರ್.ಧೂಳಿ, ಬೆಂಗಳೂರು ನ್ಯೂ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಶಾಲೆಯ ಶರಣ್ಯಾ ಭಟ್, ಹಾಸನದ ಸುಧನ್ವಾ ಎಂ.ಕೆ, ಉತ್ತರ ಕನ್ನಡದ ವರ್ಷಿಣಿ ಎಸ್.ಹೆಗಡೆ, ಶಿರಸಿಯ ಚಂದನಾ ಎಚ್.ಎಸ್, ಮೂಡುಬಿದಿರೆಯ ರೋಟರಿ ಇಂಗ್ಲಿಷ್ ಮೀಡಿಯಂ ಶಾಲೆಯ ಆತ್ಮಿಕಾ.

ADVERTISEMENT

ಪ್ರೌಢ ವಿಭಾಗ: ಬೆಂಗಳೂರಿನ ವಾಗ್ದೇವಿ ವಿಲಾಸ್ ಶಾಲೆಯಪ್ರಜ್ಞಾ ಭಟ್, ಶಿರಸಿಯ ಮಾರಿಗುಡಿ ಸರ್ಕಾರಿ ಪ್ರೌಢಶಾಲೆಯ ಸ್ನೇಹಾ ಆನಂದ ಶರ್ಮಾ, ಶಿರಸಿಯ ಚಂದನಾ ಪ್ರೌಢಶಾಲೆಯ ಯಶಸ್ವಿನಿ ಹೆಗಡೆ, ದಾವಣಗೆರೆಯ ಅಮೃತವಿದ್ಯಾಲಯದ ಅಮೃತಾ.ಎ, ಶಿವಮೊಗ್ಗದ ಭಾರತೀಯ ವಿದ್ಯಾಪೀಠದ ಧನ್ಯಾ ಎಸ್. ಉಮ್ರಾಣಿ.

ಭಾಷಣ ಸ್ಪರ್ಧೆ: ಶಿರಸಿಯ ಸೇಂಟ್ ಅಂಥೋನಿ ಶಾಲೆಯ ಮಾನ್ಯಾ ಎಂ. ಹೆಗಡೆ, ಬೆಂಗಳೂರಿನ ಎಂ.ಇ.ಎಸ್. ಕಿಶೋರ ಕೇಂದ್ರದ ಮೃದುಲಾ ಆನಂದಕುಮಾರ್, ಉಡುಪಿ ತೆಕ್ಕಟ್ಟೆಯ ಕುವೆಂಪು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೃದ್ಧಿ, ಚಿಕ್ಕಮಗಳೂರು ಶ್ರೀರಾಮಪುರದ ಸಾಯಿ ಏಂಜೆಲ್ಸ್ ಶಾಲೆಯ ಪ್ರದ್ಯುಮ್ನ ಇ.ವಿ, ಧಾರವಾಡದ ರಾಷ್ಟ್ರೋತ್ಥಾನ ವಿದ್ಯಾಲಯದ ಶ್ರೀಶ ವಿ.ಭಟ್.

8, 9, 10ನೇ ತರಗತಿ: ಕುಮಟಾದ ಸಿ.ವಿ.ಎಸ್.ಕೆ.ಯ ಭೂಮಿಕಾ ಎಸ್.ಭಟ್, ಬೆಂಗಳೂರಿನ ಶ್ರೀ ವಿದ್ಯಾಮಂದಿರದ ಅನಘಾ ಬಿ.ಎಲ್., ಹಾಸನದ ಶ್ರೀ ವಿಜಯಾ ಅಂಗ್ಲ ಮಾಧ್ಯಮ ಶಾಲೆಯ ಆಕಾಂಕ್ಷಾ ಜೆ.ಎಸ್., ಉಡುಪಿಯ ಸಣ್ಣಾರೆ ಎಕ್ಸಲೆಂಟ್ ಪಿ.ಕಾಲೇಜಿನಸಾಧನಾ ದೇವಾಡಿಗ,‌ ಬಂಟ್ವಾಳದಎಸ್.ವಿ.ಎಸ್. ಆಂಗ್ಲಮಾಧ್ಯಮ ಶಾಲೆಯ ಶ್ರೀನಿಧಿ ಪಿ.ಎಸ್.

ಜ್ಞಾನ ಗಣ ಕಂಠಪಾಠ ಸ್ಪರ್ಧೆ (ಪಿ.ಯು.ಸಿ ವಿದ್ಯಾರ್ಥಿಗಳಿಗೆ): ಮಂಗಳೂರಿನ ಕೆನರಾ ಪಿ.ಯು.ಕಾಲೇಜಿನ ಎಸ್. ಕೀರ್ತನಾ ಶೆಣೈ, ಉತ್ತರ ಕನ್ನಡದ ಶ್ರೀದೇವಿ ಪಿ.ಯು ಕಾಲೇಜಿನ ಕೆ.ಎನ್.ಕೀರ್ತಿ ಹಾಗೂ ಬೆಂಗಳೂರೊನ ಪ್ರೆಸಿಡೆನ್ಸಿ ಪಿ.ಯು. ಕಾಲೇಜಿನ ವಿಕಾಸ್ ಹೆಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.