ADVERTISEMENT

ಭಟ್ಕಳ: ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2025, 13:42 IST
Last Updated 31 ಮಾರ್ಚ್ 2025, 13:42 IST
ಭಟ್ಕಳದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಈದ್‌ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ಭಟ್ಕಳದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಈದ್‌ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು   

ಭಟ್ಕಳ: ತಾಲ್ಲೂಕಿನಲ್ಲಿ ಈದ್ ಉಲ್ ಫಿತ್ರ್ಅನ್ನು ಸೋಮವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಭಾನುವಾರ ರಾತ್ರಿ ಚಂದ್ರದರ್ಶನ ನಂತರ ಹಬ್ಬ ಘೋಷಣೆಯಾಗುತ್ತಲೆ ತಾಲ್ಲೂಕಿನ ಪ್ರಮುಖ ಮಸೀದಿಗಳಲ್ಲಿ ಮಧ್ಯರಾತ್ರಿ ತನಕ ಪ್ರಾರ್ಥನೆ ನಡೆಯಿತು.

ಸೋಮವಾರ ಮುಂಜಾನೆ ಶುಭ್ರವಸ್ತ್ರಧಾರಿಗಳಾದ ಮುಸ್ಲಿಮರು ತಾಲ್ಲೂಕಿನ ವಿವಿಧ ಭಾಗಗಳಿಂದ ಸಹಸ್ರ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಬಂದು ಬಂದರ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಸಮಾವೇಶಗೊಂಡು ಸಾಮೂಹಿಕ ಪ್ರಾರ್ಥನ ಸಲ್ಲಿಸಿದರು. ಈದ್ಗಾ ಮೈದಾನದಲ್ಲಿ ಸ್ಥಳಾವಕಾಶದ ಕೊರತೆಯಿಂದ ರಸ್ತೆ ಮೇಲೆ ಕುಳಿತು ಪ್ರಾರ್ಥನೆ ಸಲ್ಲಿಸಿದರು. ಸಾಮೂಹಿಕ ಪ್ರಾರ್ಥನೆ ಬಳಿಕ ಪರಸ್ಪರ ತಬ್ಬಿಕೊಂಡು ಹಬ್ಬದ ಶುಭಾಶಯ ಮಿನಿಮಯ ಮಾಡಿಕೊಂಡರು.

ಜಾಮಿಯಾ ಮಸೀದಿ ಮುಖ್ಯಸ್ಥ ಮೌಲಾನಾ ಅಬ್ದುಲ್ ಅಲಮ್ ನದ್ವಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಬೋಧಿಸಿ ಹಬ್ಬದ ಸಂದೇಶ ಸಾರಿದರು. ಈದ್ಗಾ ಸಮಿತಿ ಸದಸ್ಯ ಸೈಯದ್ ಹಾಸೀಮ್ ಎಸ್.ಜೆ. ಮೆರವಣಿಗೆಯ ಉಸ್ತುವಾರಿ ವಹಿಸಿದ್ದರು. ಖಲೀಫಾ ಜಮಾತುಲ್ ಮಸ್ಲಿಮೀನ್ ಮುಖ್ಯ ಖಾಜಿ ಮೌಲಾನಾ ಅಕ್ರಮಿ ಮದನಿ ನದ್ವಿ, ಮೌಲಾನಾ ಅನ್ಸರ್ ಮದನಿ, ಮೌಲಾನಾ ಆಯ್ಮನ್ ನದ್ವಿ ಹಗೂ ಮೌಲಾನಾ ಅಬ್ದುಲ್ ನೂರ್ ನದ್ವಿ ಇದ್ದರು.

ADVERTISEMENT

ಭಟ್ಕಳ ಡಿವೈಎಸ್ಪಿ ಕೆ. ಮಹೇಶ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.