ADVERTISEMENT

ಭಟ್ಕಳ | ಕಿತ್ರೆ ದೇವಿಮನೆ ರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 6:57 IST
Last Updated 28 ಜನವರಿ 2026, 6:57 IST
ಭಟ್ಕಳ ಕಿತ್ರೆ ದೇವಿಮನೆ ರಥೋತ್ಸವ ವಿಜೃಂಭಣೆಯಿಂದ ನಡೆಯಿತು
ಭಟ್ಕಳ ಕಿತ್ರೆ ದೇವಿಮನೆ ರಥೋತ್ಸವ ವಿಜೃಂಭಣೆಯಿಂದ ನಡೆಯಿತು   

ಭಟ್ಕಳ: ತಾಲ್ಲೂಕಿನ ಕಿತ್ರೆಯ ದುರ್ಗಾ ಪರಮೇಶ್ವರಿ ದೇವಸ್ಥಾನದ ರಥೋತ್ಸವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಉಪಸ್ಥಿತಿಯಲ್ಲಿ ಮಂಗಳವಾರ ವಿಜ್ರಂಭಣೆಯಿಂದ ನೆರವೇರಿತು.

ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ದೇವಸ್ಥಾನದ ತಾಂತ್ರಿಕ ಅಮೃತೇಶ್ ಭಟ್ಟ ಗೋಕರ್ಣ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಬಾಲಚಂದ್ರ ಭಟ್ಟ ನೇತೃತ್ವದಲ್ಲಿ ಜರುಗಿದವು.

ನೂರಾರು ಜನರು ರಥಕ್ಕೆ ಕಾಣಿಕೆ ಸಲ್ಲಿಸಿದರು. ಮಂಗಳವಾರ ಬೆಳಿಗ್ಗೆಯಿಂದ ದೇವಸ್ಥಾನದಲ್ಲಿ ಗಣೇಶ ಪೂಜೆ, ಪುಣ್ಯಾಹ, ರುದ್ರಹವನದ ಮಹಾಸಂಕಲ್ಪ, ಶ್ರೀದೇವರಿಗೆ ಕಲಾವೃದ್ಧಿ- ಯಾದಿ ಹವನ, ವೀರಭದ್ರ ದೇವರ ಪ್ರೀತ್ಯರ್ಥ ರುದ್ರಹವನದ ಪೂರ್ಣಾಹುತಿ ನಡೆಯಿತು.

ADVERTISEMENT

ದೇವಸ್ಥಾನದ ಮೊಕ್ತೇಸರ ಉಮೇಶ್ ಹೆಗಡೆ, ದೇವಿಮನೆ ಆಡಳಿತ ಸಮಿತಿಯ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು, ಉಪಾಧ್ಯಕ್ಷ ಪರಮೇಶ್ವರ ಭಟ್ಟ, ನಿಕಟಪೂರ್ವ ಅಧ್ಯಕ್ಷ ಶಿವಾನಂದ ಹೆಬ್ಬಾರ, ಭವತಾರಿಣಿ ವಲಯದ ಅಧ್ಯಕ್ಷ ವಿಘ್ನೇಶ್ವರ ಉಪಾಧ್ಯಾಯ, ಕಾರ್ಯದರ್ಶಿ ವಿನಾಯಕ ಭಟ್ಟ ತೆಕ್ನಗದ್ದೆ, ಪ್ರಮುಖರಾದ ಎಂ ಎಂ ಹೆಬ್ಬಾರ್, ನಾರಾಯಣ ಹೆಬ್ಬಾರ ಬೆಣಂದೂರು,ರಾಧಾಕೃಷ್ಣ ಬೆಂಗಳೂರು ಇದ್ದರು.

ಮಧ್ಯಾಹ್ನ ಸಾವಿರಕ್ಕೂ ಅಧಿಕ ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು. ಗಜಾನನ ಕಲೆ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಟ್ರಸ್ಟ ಮೇಲಿನ ಮಣ್ಣಿಗೆ ಹೊನ್ನಾವರ ಅವರಿಂದ ನಡೆದ ವರದಯೋಗಿ ಶ್ರೀಧರ ನಾಟಕ ಪ್ರದರ್ಶನ ಪ್ರೇಕ್ಷಕರ ಮನರಂಜಿಸಿತು.

ಧಾರ್ಮಿಕ ಸಭೆ: ರಥೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ರಾಘವೇಶ್ವರ ಭಾರತೀ ಸ್ವಾಮೀಜಿ, ಕಿತ್ರೆಯ ದೇವಿಮನೆ ಕ್ಷೇತ್ರ ಸ್ವಯಂಭೂ ಲಿಂಗ ಹೊಂದಿರುವ ಪುಣ್ಯ ಕ್ಷೇತ್ರವಾಗಿದೆ. ದೇವಿಮನೆ ದುರ್ಗಾಪರಮೇಶ್ವರಿ ದೇವಿಯಲ್ಲಿ ಭಕ್ತಿಯಿಂದ ಬೇಡಿಕೊಂಡರೆ ಸರ್ವ ಸಮಸ್ಯೆಗೂ ಪರಿಹಾರ ಸಿಗಲಿದೆ ಎಂದರು.

ದೇವಿಮನೆ ಆಡಳಿತ ಮಂಡಳಿಯಿಂದ ಸಾಧಕ ಪ್ರಶಸ್ತಿ ಪಡೆದ ಉದ್ಯಮಿ ಅಶೋಕ ಭಟ್ಟ ಮಾತನಾಡಿದರು. ದೇವಸ್ಥಾನದ ಮೊಕ್ತೇಸರ ಉಮೇಶ ಹೆಗಡೆ ಅವರು ಸಭಾ ಪೂಜೆ ನೆರವೇರಿಸಿ ಸ್ವಾಗತಿಸಿದರು. ದೇವಿಮನೆ ಆಡಳಿತ ಮಂಡಳಿ ಅಧ್ಯಕ್ಷ ವಿನಾಯಕ ಭಟ್ಟ ವರದಿ ವಾಚಿಸಿದರು. ಶುಭಾ ದೇಸಾಯಿ ನಿರೂಪಿಸಿದರು. ಹವ್ಯಕ ಕ್ರೀಡೋತ್ಸವದಲ್ಲಿ ವಿಜೇರಾದವರಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.