ADVERTISEMENT

ಧರ್ಮ ಕಾರ್ಯಕ್ಕೆ ಅನುಮತಿ ಬೇಕಿಲ್ಲ: ವಿಶ್ವಸಂತೋಷ ಭಾರತಿ ಸ್ವಾಮೀಜಿ

‘ಭೂತಾಳ ಪಾಂಡ್ಯ’ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 11 ಮೇ 2019, 15:14 IST
Last Updated 11 ಮೇ 2019, 15:14 IST
ಅಂಕೋಲಾದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಡಾ.ಬಿ.ಎಂ.ಹೆಗ್ಡೆ ಅವರಿಗೆ ‘ಭೂತಾಳ ಪಾಂಡ್ಯ’ ಪ್ರಶಸ್ತಿ ‍ಪ್ರದಾನ ಮಾಡಲಾಯಿತು
ಅಂಕೋಲಾದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಡಾ.ಬಿ.ಎಂ.ಹೆಗ್ಡೆ ಅವರಿಗೆ ‘ಭೂತಾಳ ಪಾಂಡ್ಯ’ ಪ್ರಶಸ್ತಿ ‍ಪ್ರದಾನ ಮಾಡಲಾಯಿತು   

ಅಂಕೋಲಾ:‘ಧರ್ಮಕಾರ್ಯಕ್ಕೆ ಯಾರನ್ನೂಕೇಳುವುದು ಬೇಡ, ಮಾಡುತ್ತಾ ಹೋಗಿ. ಇಷ್ಟವಿದ್ದವರು ಕೂಡುತ್ತಾ ಹೋಗುತ್ತಾರೆ. ಬಾರ್ಕೂರು ಸಂಸ್ಥಾನವು ಕರಾವಳಿ ಭಾಗದ ಬಂಟರು ಮತ್ತು ನಾಡವರ ಸಮಾಜದ ಜೊತೆ ಒಂದಾಗಿದೆ’ ಎಂದು ವಿಶ್ವಸಂತೋಷ ಭಾರತಿ ಸ್ವಾಮೀಜಿಹೇಳಿದರು.

ತಾಲ್ಲೂಕಿನ ಶೆಟಗೇರಿಯಲ್ಲಿ ಶನಿವಾರ ನಡೆದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳವಣಿಗೆ ಹೊಂದಿದ ನಾಡವರ ಸೈನ್ಯ ಇಲ್ಲಿದೆ. ಅಧರ್ಮಕ್ಕೆ ದಂಡಿಸುವ ಗುಣ ಇವರಿಗಿದೆ. ನಾವು ಯಾವುದಕ್ಕೂ ಹೆದರುವುದಿಲ್ಲ. ಬಂಟರ ಜೊತೆ ಸಮನ್ವಯತೆ ಆಗಿ ಮುಂದಿನ ದಿನಗಳಲ್ಲಿ ಶಿಕ್ಷಣ, ಆರೋಗ್ಯ ಮುಂತಾದ ಸೇವೆಗೆ ಸಮಾಜದ ಎಲ್ಲರನ್ನೂ ಒಳಗೊಂಡುಸಾಗೋಣ’ ಎಂದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ಮಾತನಾಡಿ, ‘ಇಂದಿನ ಸಾಮಾಜಿಕ ಪರಿಸ್ಥಿತಿಗೆ ಮೌಲ್ಯಗಳ ಕುಸಿತ ಕಾರಣವಾಗಿದೆ. ಎಲ್ಲರೂ ತೃಪ್ತಿ, ಮಾನವೀಯತೆ ಗುಣಗಳನ್ನು ಹೊಂದುವ ಅಗತ್ಯವಿದೆ. ಈ ಸಂಸ್ಥಾನ ಒಂದು ಜನಾಂಗದ ದಾರಿ ದೀಪವಾಗಲಿ’ ಎಂದು ಹಾರೈಸಿದರು.

‘ಭೂತಾಳ ಪಾಂಡ್ಯ’ ಪ್ರಶಸ್ತಿಯನ್ನು ಡಾ.ಬಿ.ಎಂ.ಹೆಗ್ಡೆ ಮತ್ತು ಜಾನಪದ ವಿದ್ವಾಂಸ ಡಾ.ಎನ್.ಆರ್.ನಾಯಕ ಅವರಿಗೆ ಪ್ರದಾನ ಮಾಡಲಾಯಿತು. ನಾಡವರ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಡಿ.ಎನ್.ನಾಯಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಅಪ್ಪಣ್ಣ ಹೆಗ್ಡೆ, ಡಾ.ಸತ್ಯಪ್ರಕಾಶ ಶೆಟ್ಟಿ, ನಾಗರಾಜ ನಾಯಕ ತೊರ್ಕೆ, ಜಿ.ಎಂ.ಶೆಟ್ಟಿ, ಶಂಕರ ಶೆಟ್ಟಿ, ಪ್ರದೀಪ ನಾಯಕ, ಗೋಪಾಲಕೃಷ್ಣ ನಾಯಕ, ಸುರೇಶ ನಾಯಕ, ಸುರೇಶ್ಚಂದ್ರ ಶೆಟ್ಟಿಇದ್ದರು.

ಆನಂದು ಕವರಿ ಸ್ವಾಗತಿಸಿದರು. ಜಗದೀಶ ನಾಯಕ ವಂದಿಸಿದರು. ಸುಭಾಸ ಕಾರೇಬೈಲ್, ರಾಜು ನಾಯಕ, ರಾಮಚಂದ್ರ ನಾಯಕ ಕಾರ್ಯಕ್ರಮ ನಿರೂಪಿಸಿದರು. ಹಾಲಾಡಿ ಮೇಳದವರಿಂದಸಂಜೆ ಯಕ್ಷಗಾನಪ್ರದರ್ಶನ ಹಮ್ಮಿಕೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.