ADVERTISEMENT

ಪರಿಸರ ಕಾಳಜಿಗೆ ಸೈಕಲ್ ಜಾಥಾ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 14:10 IST
Last Updated 9 ನವೆಂಬರ್ 2019, 14:10 IST
ಶಿರಸಿಯಲ್ಲಿ ಶನಿವಾರ ಸೈಕಲ್ ಜಾಗೃತಿ ಜಾಥಾ ನಡೆಯಿತು
ಶಿರಸಿಯಲ್ಲಿ ಶನಿವಾರ ಸೈಕಲ್ ಜಾಗೃತಿ ಜಾಥಾ ನಡೆಯಿತು   

ಶಿರಸಿ: ಮಾಲಿನ್ಯಮುಕ್ತ ಭಾರತ ಅಭಿಯಾನ ಸಂಘಟನೆ ವತಿಯಿಂದ ಶನಿವಾರ ನಗರದಲ್ಲಿ ಬೃಹತ್ ಸೈಕಲ್ ಜಾಗೃತಿ ಜಾಥಾ ನಡೆಯಿತು. ಶಾಲಾ ಮಕ್ಕಳು, ಸಾರ್ವಜನಿಕರು, ಸಂಘ–ಸಂಸ್ಥೆಗಳ ಪ್ರಮುಖರು ಸೈಕಲ್ ತುಳಿದು, ಪರಿಸರಸ್ನೇಹಿ ವ್ಯವಸ್ಥೆಯ ಬಗ್ಗೆ ಜಾಗೃತಿ ಮೂಡಿಸಿದರು.

ವಿಕಾಸಾಶ್ರಮದಿಂದ ಹೊರಟ ಜಾಥಾ ಅಶ್ವಿನಿ ವೃತ್ತ, ಹೊಸಪೇಟೆ ರಸ್ತೆ, ದೇವಿಕೆರೆ, ಶಿವಾಜಿ ಚೌಕ, ಚನ್ನಪಟ್ಟಣ ಬಝಾರ ಮಾರ್ಗವಾಗಿ ಸಂಚರಿಸಿತು. 52 ವರ್ಷಗಳಿಂದ ನಿರಂತರವಾಗಿ ಸೈಕಲ್ ಬಳಸುತ್ತಿರುವ ಉಡುಪಿಕರ ಕ್ಲಾಥ್ ಸ್ಟೋರ್ಸ್ ಮಾಲೀಕ ಪ್ರಕಾಶ ಉಡುಪಿಕರ ಜಾಥಾಕ್ಕೆ ಚಾಲನೆ ನೀಡಿದರು. ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಕೈಜೋಡಿಸಿದ್ದವು.

ಅಭಿಯಾನದ ರೂವಾರಿ ಅಜಿತ ನಾಡಿಗ್, ಸಂಚಾಲಕ ಮನೋಜ್ ಜೋಗಳೇಕರ, ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ, ಪ್ರಮುಖರಾದ ಜಿ.ಎ.ಹೆಗಡೆ, ಡಾ. ದಿನೇಶ ಹೆಗಡೆ, ಡಾ. ಸುಮನ್ ಹೆಗಡೆ, ಡಾ.ಕಿಶೋರ ಪವಾರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.