ADVERTISEMENT

ಹಳೇ ಬಸ್ ನಿಲ್ದಾಣ: ಬಸ್ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 14:53 IST
Last Updated 6 ಏಪ್ರಿಲ್ 2022, 14:53 IST
ಏ.6 ರಂದು ‘ಪ್ರಜಾವಾಣಿ’ ಪ್ರಕಟಿಸಿದ್ದ ವರದಿ.
ಏ.6 ರಂದು ‘ಪ್ರಜಾವಾಣಿ’ ಪ್ರಕಟಿಸಿದ್ದ ವರದಿ.   

ಶಿರಸಿ: ಮಾರಿಕಾಂಬಾ ಜಾತ್ರೆ ಮುಗಿದು ಹದಿನಾಲ್ಕು ದಿನಗಳ ಬಳಿಕ ಸ್ಥಳೀಯ ಬಸ್ ಸೇರಿದಂತೆ ದೂರದ ಮಾರ್ಗದ ಬಸ್‍ಗಳು ಹಳೇ ಬಸ್ ನಿಲ್ದಾಣದತ್ತ ಸಂಚಾರ ಆರಂಭಿಸಿವೆ.

ಆದರೆ, ಹೊಸ ಬಸ್ ನಿಲ್ದಾಣದಿಂದಲೇ ಎಲ್ಲ ಬಸ್‍ಗಳು ಸಂಚರಿಸಲಿದೆ. ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದಹಳೇ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸಂಚಾರ ನಡೆಸಲಿವೆ. ಇದರಿಂದ ಪ್ರಯಾಣಿಕರು ಐದು ರಸ್ತೆ ವೃತ್ತದಲ್ಲಿ ಬಸ್‍ಗಾಗಿ ಕಾಯುವುದು ತಪ್ಪಲಿದೆ.

‘ರಸ್ತೆಯೇ ಪ್ರಯಾಣಿಕರಿಗೆ ನಿಲ್ದಾಣ’ ಶೀರ್ಷಿಕೆ ಅಡಿ ಪ್ರಜಾವಾಣಿ ಏ.6 ರಂದು ವರದಿ ಪ್ರಕಟಿಸಿತ್ತು. ನೂರಾರು ಪ್ರಯಾಣಿಕರು ತಂಗುದಾಣವಿಲ್ಲದೆ ಬಸ್‍ಗಾಗಿ ಕಾಯುವ ಸಮಸ್ಯೆಯನ್ನು ತಿಳಿಸಲಾಗಿತ್ತು.

ADVERTISEMENT

‘ಹಳೇ ಬಸ್ ನಿಲ್ದಾಣದ ಜಾಗದಲ್ಲಿ ಕಟ್ಟಡ ಕಾಮಗಾರಿ ಆರಂಭಗೊಳ್ಳುವವರೆಗೆ ಎಲ್ಲ ಬಸ್‍ಗಳು ಹೊಸ ಬಸ್ ನಿಲ್ದಾಣದಿಂದ ಹೊರಟು ಅಲ್ಲಿಗೆ ಭೇಟಿ ನೀಡಿ ತೆರಳುವಂತೆ ಸೂಚಿಸಲಾಗಿದೆ’ ಎಂದು ಸಾರಿಗೆ ಸಮಸ್ಥೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.