ADVERTISEMENT

ಖಾರ್ಲ್ಯಾಂಡ್‌ನಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2025, 14:01 IST
Last Updated 10 ಜೂನ್ 2025, 14:01 IST
ಗೋಕರ್ಣದ ಸಮೀಪದ ಹೊಸ್ಕಟ್ಟಾದ ಖಾರ್ಲ್ಯಾಂಡಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಯಿತು. ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್. ಹಾಜರಿದ್ದರು  
ಗೋಕರ್ಣದ ಸಮೀಪದ ಹೊಸ್ಕಟ್ಟಾದ ಖಾರ್ಲ್ಯಾಂಡಿನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಯಿತು. ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್. ಹಾಜರಿದ್ದರು     

ಗೋಕರ್ಣ: ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ, ತೊರ್ಕೆ ಗ್ರಾಮ ಪಂಚಾಯಿತಿಯ ಹೊಸ್ಕಟ್ಟಾದ ಗಜನಿ ಖಾರ್ಲ್ಯಾಂಡ್‌ನಲ್ಲಿ ಸುರಕ್ಷತೆಯ ದೃಷ್ಟಿಯಿಂದ ಮಂಗಳವಾರ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಯಿತು. ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್. ಹಾಗೂ ಸಿಬ್ಬಂದಿ ಇದ್ದರು.

ಸ್ವಲ್ಪ ದಿನಗಳ ಹಿಂದೆ ಇದೇ ರೀತಿ ಗಂಗಾವಳಿ ಸೇತುವೆಯ ಮೇಲೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಿಂದ, ಸೇತುವೆಯ ಮೇಲೆ ಮಗುವನ್ನು ನಿಲ್ಲಿಸಿ ಫೋಟೊ ತೆಗೆಯುತ್ತಿದ್ದ ಪ್ರವಾಸಿಗರಿಗೆ ಎಚ್ಛರಿಕೆ ನೀಡಲಾಗಿತ್ತು. ಜಾಲತಾಣದಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೊ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT