ADVERTISEMENT

ಚದುರಂಗ ಆಟ ಬೆಳವಣಿಗೆ ಸಹಾಯಕ: ಟಿ.ಎಸ್.ಹಾದಿಮನಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 12:54 IST
Last Updated 4 ಜೂನ್ 2025, 12:54 IST
ದಾಂಡೇಲಿಯ ಅಂಬೇವಾಡಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲಾ ಚೆಸ್ ಪಾರ್ಕ್ ಆವರಣದಲ್ಲಿ ನಡೆದ ಚೆಸ್ ಪಂದ್ಯಾವಳಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಎಸ್.ಹಾದಿಮನಿ ಚಾಲನೆ ನೀಡಿ ಮಾತನಾಡಿದರು.
ದಾಂಡೇಲಿಯ ಅಂಬೇವಾಡಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲಾ ಚೆಸ್ ಪಾರ್ಕ್ ಆವರಣದಲ್ಲಿ ನಡೆದ ಚೆಸ್ ಪಂದ್ಯಾವಳಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಎಸ್.ಹಾದಿಮನಿ ಚಾಲನೆ ನೀಡಿ ಮಾತನಾಡಿದರು.   

ದಾಂಡೇಲಿ: ನಗರದ ಅಂಬೇವಾಡಿಯ ಗಾಂವಠಾಣದ ಉರ್ದು ಪ್ರಾಥಮಿಕ ಶಾಲಾ ಆವರಣದಲ್ಲಿರುವ ಚೆಸ್ ಪಾರ್ಕ್‌ನಲ್ಲಿ ಅಂಬೇವಾಡಿಯ ಗ್ರಾಮ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಚೆಸ್ ಪಂದ್ಯಾವಳಿಯನ್ನು ಬುಧವಾರ ಹಮ್ಮಿಕೊಳ್ಳಲಾಯಿತು.

ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಎಸ್.ಹಾದಿಮನಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಚದುರಂಗ ಭಾರತದ ಪುರಾತನ ಕ್ರೀಡೆಯಾಗಿದ್ದು, ಮಕ್ಕಳ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯಕವಾಗಿದೆ. ಸಣ್ಣ ವಯಸ್ಸಿನಲ್ಲೇ ಮಕ್ಕಳಿಗೆ ಚೆಸ್ ಕ್ರೀಡೆಯ ಅಭಿರುಚಿಯನ್ನು ಬೆಳಸಿದರೆ ಮುಂದೆ ಅದರಲ್ಲಿ ಉನ್ನತ ಮಟ್ಟದ ಸಾಧನೆ ಮಾಡಬಹುದು ಹಾಗೂ ಓದಿಗೆ, ಏಕಾಗ್ರತೆಗೆ ಸಹಕಾರಿಯಾಗುತ್ತದೆ ಎಂದರು.

ನಗರದ ರಾಷ್ಟ್ರೀಯ ಆಟಗಾರ ರಾಮಕೃಷ್ಣ ಪ್ರಭು ನಿರ್ಣಾಯಕರಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಚೆಸ್ ಆಟದ ತಂತ್ರಗಳು ಮತ್ತು ಸೂತ್ರಗಳನ್ನು ವಿವರಿಸಿ ಚೆಸ್ ಕುರಿತು ಹೆಚ್ಚಿನ ಜ್ಞಾನ ಪಡೆಯಲು ನಿರಂತರವಾಗಿ ಅಭ್ಯಾಸ ಮಾಡುವಂತೆ ತಿಳಿಸಿದರು.

ಅಂಬೇವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಈ.ಪ್ರಕಾಶ, ಗ್ರಾಮ ಪಂಚಾಯಿತಿ ಸದಸ್ಯೆ ಶಾಹಿದಾ ಬಾನು, ಚೆಸ್ ಪ್ರೇಮಿ ನವೀನ ಕಾಮತ್, ಸಿಆರ್‌ಪಿಗಳಾದ ಲಲಿತಾ.ಕೆ., ಶ್ರೀದೇವಿ, ಪಿಡಿಓ ಸಂತೋಷ ಹೆಳವರ, ದೈಹಿಕ ಶಿಕ್ಷಕರಾದ ಸೀತಾರಾಮ ನಾಯ್ಕ, ಡೇವಿಡ್ ದಾನಂ, ಮಮತಾ ಕಾಮತ್, ಮಹಾದೇವಿ, ದಿನೇಶ, ಪ್ರದೀಪ್ ಇದ್ದರು. ಗ್ರಾಮೀಣ ಮತ್ತು ನಗರ ಎರಡು ವಿಭಾಗಗಳಲ್ಲಿ 65 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ADVERTISEMENT

ಗ್ರಾಮೀಣ ಶಾಲೆ ಬಾಲಕರ ಪ್ರಾಥಮಿಕ ವಿಭಾಗ: ಚಂದನ ಚಲವಾದಿ ಪ್ರಥಮ, ಸೋಮನಿಂಗ ಚಿಗಳ್ಳಿ ದ್ವಿತೀಯ, ಮೇತನವೀರ ಸೌದಾಗರ ತೃತೀಯ. ಬಾಲಕಿಯರ ಪ್ರಾಥಮಿಕ ವಿಭಾಗ: ಪ್ರಥ್ವಿ ಸುತಾರ ಪ್ರಥಮ ,ಲಕ್ಷ್ಮಿ ಪಾಟೀಲ ದ್ವಿತೀಯ, ಅನ್ವರ್ ತಾಲಿಪರಂಬನ ತೃತೀಯ. ಬಾಲಕರ ಪ್ರೌಢಶಾಲೆ ವಿಭಾಗ: ರಾಹುಲ್ ಜಟಾರ ಪ್ರಥಮ, ವಿಕಾಸ ಠಾಕೂರ್ ದ್ವಿತೀಯ ,ಅಶ್ರಪಾಲಿ ಪಾಟೇಲ್ ತೃತೀಯ,

ಬಾಲಕಿಯರ ಪ್ರೌಢಶಾಲೆ ವಿಭಾಗ: ಮೆಹರಕ್ ಮುತುಜಾ ಪ್ರಥಮ, ದೀಪಾ ಪಾಟೀಲ ದ್ವಿತೀಯ, ಸ್ವಪ್ನಾ ಪಾರದೆ ತೃತೀಯ.  ನಗರದ ಪ್ರಾಥಮಿಕ ಶಾಲೆ ಬಾಲಕರ ವಿಭಾಗ: ಆಯೇಷಾ ವಾಂಗಿಕರ್ ಪ್ರಥಮ, ನಿಶಾಂತ್ ಶೆಟ್ಟಿ ದ್ವಿತೀಯ, ಮುತ್ತಪ್ಪ ಚಿಗಳ್ಳಿ ತೃತೀಯ, ಬಾಲಕಿಯರ ಪ್ರಾಥಮಿಕ ಶಾಲೆ ವಿಭಾಗ : ನಿಯತಿ ಮಲ್ಯ ಪ್ರಥಮ, ಪ್ರಿನ್ಸಿ ಮನಿಕೊಟ್ಲಾ ದ್ವಿತೀಯ, ಜಾನವಿ ಗ್ರಾಮ್ ಜೋಶ್ಮಿ ತೃತೀಯ,

ಬಾಲಕರ ಪ್ರೌಢಶಾಲೆ ವಿಭಾಗ:ಮಧುಕರ್ ಮಾಳಶೇಖರ್ ಪ್ರಥಮ, ಆಯುಷ್ ನಾಯಕ್ ದ್ವಿತೀಯ, ಐಸಾಕ್ ಕ್ರರಾ ತೃತೀಯ, ಬಾಲಕಿಯರ ಪ್ರೌಢಶಾಲೆ ವಿಭಾಗ: ಕಾವ್ಯ ಪ್ರಥಮ, ಶಿಷಾ ಖಾನ ದ್ವಿತೀಯ , ಯಾಸ್ಮಿನ್ ಶೇಖ ತೃತೀಯ ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.