ADVERTISEMENT

ಶಿರಸಿಯಲ್ಲಿ ಚೀನಾದ ಮೇಕೆ ಮರಿ !

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 15:23 IST
Last Updated 5 ಫೆಬ್ರುವರಿ 2020, 15:23 IST
ಚೈನೀಸ್ ಅಂಗೂರಾ ಮೇಕೆ ಮರಿಯೊಂದಿಗೆ ಡಾ.ರಾಜೇಂದ್ರ ಸಿರ್ಸಿಕರ್
ಚೈನೀಸ್ ಅಂಗೂರಾ ಮೇಕೆ ಮರಿಯೊಂದಿಗೆ ಡಾ.ರಾಜೇಂದ್ರ ಸಿರ್ಸಿಕರ್   

ಶಿರಸಿ: ಇಲ್ಲಿನ ಪದ್ಮಾ ಸೇವಾ ಟ್ರಸ್ಟ್‌ ನಡೆಸುವ ಅಮೇಝಿಂಗ್ ಪೆಟ್ ಪ್ಲಾನೆಟ್ ವಸತಿ ಕೇಂದ್ರದಲ್ಲಿ ಅಪರೂಪದ ಚೈನೀಸ್ ಅಂಗೂರಾ ಮೇಕೆ ಮರಿ ಹುಟ್ಟಿದೆ.

‘ಮೂರು ವರ್ಷಗಳ ಹಿಂದೆ ಹೈದ್ರಾಬಾದ್‌ನ ಉದ್ಯಮಿಯೊಬ್ಬರು ಕಸಾಯಿಖಾನೆಗೆ ನೀಡಿದ್ದ ಅಸ್ವಸ್ಥ ಹಾಗೂ ಬಳಲಿದ ಚೀನಾದ ಅಂಗೂರಾ ಮೇಕೆಯನ್ನು ಶಿರಸಿಗೆ ತಂದು ಅದರ ಆರೈಕೆ ಮಾಡಲಾಗಿತ್ತು. ಚೇತರಿಸಿಕೊಂಡ ಮೇಕೆ ಆರೋಗ್ಯವಾಗಿ ಬೆಳೆದಿತ್ತು. ಈ ಮೇಕೆ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದೆ. ಚೀನಾದ ಹಿಮಪ್ರದೇಶದಲ್ಲಿ ಕಾಣುವ ಈ ಮೇಕೆ ಭಾರತದಲ್ಲಿ ಕಾಣಸಿಗುವುದು ಅಪರೂಪ. ಪೆಟ್ ಪ್ಲಾನೆಟ್‌ನ ಹೊಸ ಅತಿಥಿಗೆ ‘ರಿಯೊ’ ಎಂದು ನಾಮಕರಣ ಮಾಡಲಾಗಿದೆ’ ಎಂದು ಕೇಂದ್ರದ ಮುಖ್ಯಸ್ಥ ಡಾ.ರಾಜೇಂದ್ರ ಸಿರ್ಸಿಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT