ADVERTISEMENT

ಉತ್ತರ ಕನ್ನಡ: ‘ಬಿಜೆಪಿಯಿಂದ ಸೇನೆ ಖಾಸಗೀಕರಣ’

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 5:14 IST
Last Updated 28 ಜೂನ್ 2022, 5:14 IST
ಅಗ್ನಿಪಥ್ ಯೋಜನೆಯ ವಿರುದ್ದ ಯಲ್ಲಾಪುರದಲ್ಲಿ ಬ್ಲಾಕ್ ಕಾಂಗ್ರೆಸ್ ಕಾಂಗ್ರೆಸ್‌ ಸತ್ಯಾಗ್ರಹ ನಡೆಸಿತು
ಅಗ್ನಿಪಥ್ ಯೋಜನೆಯ ವಿರುದ್ದ ಯಲ್ಲಾಪುರದಲ್ಲಿ ಬ್ಲಾಕ್ ಕಾಂಗ್ರೆಸ್ ಕಾಂಗ್ರೆಸ್‌ ಸತ್ಯಾಗ್ರಹ ನಡೆಸಿತು   

ಯಲ್ಲಾಪುರ: ಅಗ್ನಿಪಥ್ ಯೋಜನೆ ದೇಶದ ಯುವಜನತೆಗೆ ಮಾರಕವಾಗಲಿದೆ. ಈಗಾಗಲೇ ರೈಲ್ವೆ, ವಿಮಾನ ನಿಲ್ದಾಣ, ಬ್ಯಾಂಕ್ ಹಾಗೂ ಇತರೆ ವಲಯವನ್ನು ಖಾಸಗೀಕರಣ ಮಾಡಿರುವ ಕೇಂದ್ರದ ಸರ್ಕಾರ ಇದೀಗ ಸೈನ್ಯದ ನೇಮಕಾತಿಯನ್ನೂ ಖಾಸಗೀಕರಣ ಮಾಡಲು ಹೊರಟಿದೆ ಎಂದು ಕೆಪಿಸಿಸಿ ಸದಸ್ಯೆ ಸುಶ್ಮಾ ರಾಜಗೋಪಾಲ ಆರೋಪಿಸಿದರು.

ಅಗ್ನಿಪಥ್ ಯೋಜನೆಯ ವಿರುದ್ಧ ಪಟ್ಟಣದ ಬೆಲ್ ರಸ್ತೆಯಲ್ಲಿ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಸ್. ಭಟ್ಟ, ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್ ನಾಯ್ಕ , ಮುಂಡಗೋಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪಾಟೀಲ್, ಡಿಸಿಸಿ ಸದಸ್ಯೆ ಸುಮಾ ಉಗ್ರಾಣಕರ್, ಪ್ರಮುಖರಾದ ಬಸವರಾಜ ದೊಡ್ಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT