ADVERTISEMENT

ಹಿಂದುಳಿದ ವರ್ಗದ ಪ್ರಾತಿನಿಧ್ಯಕ್ಕಾಗಿ ಸ್ಪರ್ಧೆ: ಗಣಪತಿ ನಾಯ್ಕ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 12:49 IST
Last Updated 6 ಸೆಪ್ಟೆಂಬರ್ 2022, 12:49 IST
ಗಣಪತಿ ನಾಯ್ಕ
ಗಣಪತಿ ನಾಯ್ಕ   

ಶಿರಸಿ: ‘ಶಿರಸಿ–ಸಿದ್ದಾಪುರ ಕ್ಷೇತ್ರದಲ್ಲಿ ಹಿಂದುಳಿದ ವರ್ಗ, ಕೂಲಕಾರ್ಮಿಕ ವರ್ಗಗಳ ಪ್ರಾತಿನಿಧ್ಯಕ್ಕಾಗಿ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಹೊಂದಿದ್ದೇನೆ. ರಾಷ್ಟ್ರವಾದ ಕಾಂಗ್ರೆಸ್ ಪಕ್ಷದ (ಎನ್.ಸಿ.ಪಿ.) ಅಭ್ಯರ್ಥಿಯಾಗಲು ಈಗಾಗಲೆ ಮಾತುಕತೆ ನಡೆಸಲಾಗಿದೆ’ ಎಂದು ತಾಲ್ಲೂಕಿನ ಅಮ್ಮಿನಳ್ಳಿಯ ಗಣಪತಿ ನಾಯ್ಕ ಹೇಳಿದರು.

‘ಎನ್.ಸಿ.ಪಿ. ಪಕ್ಷದ ಶರದ್ ಪವಾರ್ ಜತೆ ಮಾತುಕತೆ ನಡೆಸಿದ್ದು ಅವರು ಅಭ್ಯರ್ಥಿಯಾಗಿಸಲು ಒಪ್ಪಿದ್ದಾರೆ. ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದ ನಾನು ಕ್ಷೇತ್ರದ ಜನರ ಜತೆ ನಿರಂತರ ಸಂಪರ್ಕ ಇಟ್ಟುಕೊಂಡು ಕೆಲಸ ಮಾಡುವೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

‘ಪಕ್ಷದ ಕಚೇರಿ ಶೀಘ್ರವೇ ತೆರೆಯಲಾಗುವುದು. ತಾಲ್ಲೂಕು ಸಮಿತಿ ರಚಿಸಿ ಪದಾಧಿಕಾರಿಗಳ ನೇಮಕ ಮಾಡಿ ಪಕ್ಷ ಸಂಘಟನೆ ಮಾಡಲಾಗುವುದು. ಶಿರಸಿ, ಸಿದ್ದಾಪುರ ಭಾಗದ ಸಾವಿರಾರು ಯುವಕರು ಉದ್ಯೋಗ ಅರಸಿ ಮಹಾನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಇಂತಹ ಸಮಸ್ಯೆ ತಡೆಗಟ್ಟಿ ಸ್ಥಳಿಯವಾಗಿ ಉದ್ಯೋಗಾವಕಾಶ ಸೃಷ್ಟಿಸಲು ಆದ್ಯತೆ ನೀಡುವೆ’ ಎಂದರು.

ADVERTISEMENT

ಪರಮೇಶ್ವರ ಮಡಿವಾಳ, ವಿಜೇತ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.