ADVERTISEMENT

ಅತಿವೃಷ್ಟಿ ಪರಿಹಾರದ ₹82 ಕೋಟಿ ಬಿಡುಗಡೆಗೊಳಿಸಿ

ಸಿವಿಲ್ ಗುತ್ತಿಗೆದಾರರ ಸಂಘದ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜುಲೈ 2022, 12:57 IST
Last Updated 18 ಜುಲೈ 2022, 12:57 IST
ರಾಮನಾಥ (ಧೀರೂ) ಶಾನಭಾಗ
ರಾಮನಾಥ (ಧೀರೂ) ಶಾನಭಾಗ   

ಶಿರಸಿ: ಕಳೆದ ವರ್ಷ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳಲು ಲೋಕೋಪಯೋಗಿ ಇಲಾಖೆಗೆ ಘೋಷಣೆಯಾಗಿದ್ದ ₹100 ಕೋಟಿ ಅನುದಾನದಲ್ಲಿ ಇನ್ನೂ ₹82 ಕೋಟಿ ಬಿಡುಗಡೆಗೆ ಬಾಕಿ ಇದೆ. ಕೂಡಲೆ ಇದನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಸಿವಿಲ್ ಗುತ್ತಿಗೆದಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮನಾಥ (ಧೀರೂ) ಶಾನಭಾಗ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಘೋಷಣೆಯಾಗಿದ್ದಪರಿಹಾರಕ್ಕೆಅನುಗುಣವಾಗಿಕಾಮಗಾರಿಪೂರ್ಣಗೊಳಿಸಲಾಗಿದೆ.ಈವರೆಗೂಗುತ್ತಿಗೆದಾರರಬಿಲ್‍ಪಾವತಿಯಾಗಿಲ್ಲ.ಬಾಕಿಮೊತ್ತಬಿಡುಗಡೆಯಾಗದಹೊರತುಹೊಸಕಾಮಗಾರಿಕೈಗೊಳ್ಳುವುದಿಲ್ಲ’ಎಂದರು.

‘ಕಳೆದ ಬಾರಿಯ ಪರಿಹಾರವನ್ನೇ ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡದೆ ಈ ಬಾರಿಯ ಅತಿವೃಷ್ಟಿ ಪರಿಹಾರ ಘೋಷಣೆಯಲ್ಲಿ ಸರ್ಕಾರ ತೊಡಗಿದೆ’ ಎಂದು ಟೀಕಿಸಿದರು.

ADVERTISEMENT

‘ಕಾಮಗಾರಿ ವೆಚ್ಚದ ಮೇಲೆ ಶೇ.12ರಷ್ಟಿದ್ದ ಜಿ.ಎಸ್.ಟಿ. ದರವನ್ನು ಶೇ.18ಕ್ಕೆ ಏರಿಕೆ ಮಾಡಲಾಗಿದೆ. ರಾಜಧನವನ್ನೂ ಶೇ.5ರಷ್ಟು ಕಡಿತ ಮಾಡಲಾಗುತ್ತಿದೆ. ಇದರಿಂದ ಗುತ್ತಿಗೆದಾರರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದ್ದು, ಇದರ ವಿರುದ್ಧ ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಗಿದೆ’ ಎಂದರು.

ಸಂಘದ ಜಿಲ್ಲಾ ಉಪಾಧ್ಯಕ್ಷ ಮಾಧವ ನಾಯಕ ಮಾತನಾಡಿ, ‘ಟೆಂಡರ್ ನಲ್ಲಿ ಕಡಿಮೆ ದರಕ್ಕೆ ಬಿಡ್ ಮಾಡುವ ಪದ್ಧತಿ ಕೈಬಿಡಲು ನಿರ್ಣಯಿಸಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಪರ್ಸಂಟೇಜ್ ನೀಡದಂತೆ ಸಂಘದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ’ ಎಂದರು.

ಸಂಘದ ನಿಟಕಪೂರ್ವ ಅಧ್ಯಕ್ಷ ಶ್ಯಾಮಸುಂದರ ಭಟ್, ಉಪಾಧ್ಯಕ್ಷ ರಮೇಶ ದುಬಾಶಿ, ಕೋಶಾಧ್ಯಕ್ಷ ಗಣೇಶ ದಾವಣಗೆರೆ, ಪ್ರಧಾನ ಕಾರ್ಯದರ್ಶಿ ಜಿ.ಎಸ್.ಹಿರೇಮಠ, ನಾಗೇಶ ನಾಯ್ಕ, ಅನಿಲ ಮಾಳ್ಸೇಕರ್, ಪ್ರಶಾಂತ ನಾಯ್ಕ, ದೀಪಕ ನಾಯ್ಕ, ವಿ.ಎಂ.ಹೆಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.