ADVERTISEMENT

ಶಿರಸಿ: ಕೋವಿಡ್ ಪತ್ತೆ ಪ್ರಯೋಗಾಲಯ ಉದ್ಘಾಟನೆ ಇಂದು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 7:53 IST
Last Updated 23 ಅಕ್ಟೋಬರ್ 2021, 7:53 IST
ಶಿರಸಿಯ ಕೋವಿಡ್ ಪತ್ತೆ ಪ್ರಯೋಗಾಲಯ
ಶಿರಸಿಯ ಕೋವಿಡ್ ಪತ್ತೆ ಪ್ರಯೋಗಾಲಯ   

ಶಿರಸಿ: ಜಿಲ್ಲೆಯ ಘಟ್ಟದ ಮೇಲಿನ ತಾಲ್ಲೂಕುಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸ್ಥಾಪಿಸಲಾದ ಕೋವಿಡ್ ಪತ್ತೆ ಪ್ರಯೋಗಾಲಯ ಶನಿವಾರ ಉದ್ಘಾಟನೆಗೊಳ್ಳಲಿದೆ.

ಇದು ಜಿಲ್ಲೆಯ ಎರಡನೇ ಪ್ರಯೋಗಾಲಯವಾಗಿದೆ. ಆರ್.ಟಿ.ಪಿ.ಸಿ.ಆರ್ ಸೇರಿದಂತೆ ಇನ್ನಿತರ ಯಂತ್ರೋಪಕರಗಳನ್ನು ಈಗಾಗಲೆ ಅಳವಡಿಕೆ ಮಾಡಲಾಗಿದೆ. ಕಳೆದ ಹದಿನೈದು ದಿನಗಳಿಂದ ಇಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ.

ಕಳೆದ ಎರಡು ಅಲೆಗಳ ಸಂದರ್ಭದಲ್ಲಿ ಕಾರವಾರದ ಕ್ರಿಮ್ಸ್‌ನಲ್ಲಿದ್ದ ಪ್ರಯೋಗಾಲಯ ಮಾತ್ರ ಕಾರ್ಯನಿರ್ವಹಿಸಿತ್ತು. 12 ತಾಲ್ಲೂಕುಗಳ ಗಂಟಲುದ್ರವವನ್ನು ಅಲ್ಲಿಗೆ ರವಾನಿಸುತ್ತಿದ್ದ ಕಾರಣ ಒತ್ತಡ ಹೆಚ್ಚಿತ್ತು. ಅಲ್ಲದೆ, ಕೋವಿಡ್ ಪತ್ತೆ ಪರೀಕ್ಷೆ ವರದಿ ವಿಳಂಬವಾಗಿ ಕೈಸೇರುತ್ತಿತ್ತು ಎಂಬ ದೂರುಗಳಿದ್ದವು.

ADVERTISEMENT

ಈ ಸಮಸ್ಯೆ ನಿಟ್ಟಿನಲ್ಲಿ ಶಿರಸಿಯಲ್ಲಿ ಪ್ರತ್ಯೇಕ ಪ್ರಯೋಗಾಲಯ ಸ್ಥಾಪಿಸಲು ವರ್ಷದಿಂದ ನಡೆದಿದ್ದ ಪ್ರಯತ್ನ ಕೊನೆಗೂ ಕೈಗೂಡಿದೆ. ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.