ಭಟ್ಕಳ: ತಾಲ್ಲೂಕು ಪತ್ರಕರ್ತರ ಕ್ಷೇಮಾಬಿವೃದ್ದಿ ಸಂಘ ಆಯೋಜಿಸಿದ್ದ ಅಂತರ್‌ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಟ್ಕಳ ಪತ್ರಕರ್ತರ ತಂಡವು ವಿಜಯಗಳಿಸಿದೆ.
ಭಾನುವಾರ ಸಂಜೆ ನಡೆದ ಫೈನಲ್ ಪಂದ್ಯದಲ್ಲಿ ಅಂಕೋಲಾ ತಂಡವನ್ನು 28 ರನ್‌ಗಳಿಂದ ಮಣಿಸಿ ಈ ಸಾಧನೆ ಮೆರೆಯಿತು. ಫೈನಲ್ ಪಂದ್ಯದಲ್ಲಿ ಮ್ಯಾನ್ ಅಪ್ ದಿ ಮ್ಯಾಚ್ ಪ್ರಶಸ್ತಿಯನ್ನು ಭಟ್ಕಳದ ರಾಘು ನಾಯ್ಕ ಪಡೆದರು. ಅಂಕೋಲಾದ ಕಾರ್ತಿಕ ಗೌಡ ಸರಣಿ ಶ್ರೇಷ್ಠ ಪ್ರಶಸ್ತಿ, ಕಾರವಾರ ತಂಡದ ಸಂಕೇತ್ ಉತ್ತಮ ಬ್ಯಾಟ್ಸ್‌ಮ್ಯಾನ್ ಪ್ರಶಸ್ತಿ, ಭಟ್ಕಳ ತಂಡದ ಸುಹೇಲ್ ಇಸ್ಬು ಉತ್ತಮ ಬೌಲರ್, ಅಂಕೋಲಾ ತಂಡದ ರಾಜು ಗೌಡ ಉತ್ತಮ ಫೀಲ್ಡರ್ ಪ್ರಶಸ್ತಿ ಪಡೆದರು.
ಭಟ್ಕಳ ಶಹರ ಪೊಲೀಸ್ ಠಾಣೆಯ ಎಸ್.ಐ. ನವೀನ್ ನಾಯ್ಕ ಬಹುಮಾನ ವಿತರಿಸಿ, ‘ಸದಾ ಒತ್ತಡದ ಬದುಕಿನಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ ಕ್ರೀಡೆಗೆ ವಿಶೇಷ ಮಹತ್ವ ನೀಡಿದ್ದಾರೆ’ ಎಂದರು.
ಪುರಸಭೆಯ ಉಪಾಧ್ಯಕ್ಷ ಅಲ್ತಾಫ್ ಖರೂರಿ, ಜಾಲಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ಮೊಗೇರ, ಭಟ್ಕಳ ಪತ್ರಕರ್ತ ಕ್ಷೇಮಾಬಿವೃದ್ದಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ, ಉಪಾಧ್ಯಕ್ಷ ವಿಷ್ಣು ದೇವಾಡಿಗ, ಸಂಘದ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್, ಪತ್ರಕರ್ತರಾದ ಸತೀಶ ನಾಯ್ಕ, ಮನಮೋಹನ್ ನಾಯ್ಕ, ಮೋಹನ್ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.