ADVERTISEMENT

ದಾಖಲೆ ಇಲ್ಲದ ₹50 ಲಕ್ಷ ವಶ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 19:11 IST
Last Updated 4 ನವೆಂಬರ್ 2025, 19:11 IST
ಭಟ್ಕಳ ಪೊಲೀಸರು ವಶಪಡಿಸಿಕೊಂಡಿರುವ ಹಣ ಹಾಗೂ ಚಿನ್ನಾಭರಣ
ಭಟ್ಕಳ ಪೊಲೀಸರು ವಶಪಡಿಸಿಕೊಂಡಿರುವ ಹಣ ಹಾಗೂ ಚಿನ್ನಾಭರಣ   

ಭಟ್ಕಳ (ಉತ್ತರ ಕನ್ನಡ ಜಿಲ್ಲೆ): ಮುಂಬೈನಿಂದ ಪಟ್ಟಣಕ್ಕೆ ಬಂದ ಖಾಸಗಿ ಬಸ್‌ನಲ್ಲಿ ದಾಖಲೆ ಇಲ್ಲದೆ ತರುತ್ತಿದ್ದ ₹50 ಲಕ್ಷ ನಗದನ್ನು ಭಟ್ಕಳ ಶಹರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಬಸ್‌ನಲ್ಲಿ ಪಾರ್ಸೆಲ್ ರೂಪದಲ್ಲಿ ಬಂದಿದ್ದ ಸೂಟ್‌ಕೇಸ್‌ನಲ್ಲಿ ₹ 500 ಮುಖಬೆಲೆಯ ನಗದು, 401 ಗ್ರಾಂ ತೂಕದ 32 ಚಿನ್ನದ ಬಳೆಗಳು ಇದ್ದವು. ಚಿನ್ನದ ಬಳೆಗಳಿಗೆ ದಾಖಲೆ ಇದ್ದು, ಹಣಕ್ಕೆ ದಾಖಲೆ ಇಲ್ಲದ ಕಾರಣಕ್ಕೆ ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಹವಾಲಾ ದಂಧೆ ಶಂಕೆ ಇದೆ. ಹಣದ ಯಾರಿಗೆ ಸೇರಿದ್ದು ಎಂಬುದು ಪತ್ತೆಯಾಗಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.