ಭಟ್ಕಳ: ತಾಲ್ಲೂಕಿನ ವೆಂಕಟಾಪುರ ಹೊಳೆಯ ಅಳ್ವೆಕೋಡಿಯಲ್ಲಿ ಬುಧವಾರ ಮೀನುಗಾರರ ಬಲೆಗೆ ಸುಮಾರು ಎಂಟು ಅಡಿ ಉದ್ದದ ಮೊಸಳೆಯೊಂದು ಸಿಕ್ಕಿದೆ.
ಅಳ್ವೆಕೋಡಿಯಲ್ಲಿ ಯಶವಂತ ಕೃಷ್ಣ ಮೊಗೇರ ಎಂಬುವವರ ‘ಹರಿ ಓಂ’ ಎಂಬ ದೋಣಿಯ ಮೂಲಕ ಮೀನು ಹಿಡಿಯಲು ಏಂಡಿ ಬಲೆ ಹಾಕಲಾಗಿತ್ತು. ಬಲೆಯನ್ನು ಎಳೆದು ಮೀನುಗಳನ್ನು ತೆಗೆಯಲು ಮೀನುಗಾರರು ಮುಂದಾದಾಗ ಮೀನಿನೊಂದಿಗೆ ಮೊಸಳೆಯೂ ಪತ್ತೆಯಾಯಿತು. ಸಮುದ್ರದ ಅಬ್ಬರ ಹೆಚ್ಚಿರುವ ಕಾರಣ ಹಿನ್ನೀರಿನಲ್ಲಿ ಮೊಸಳೆ ಸಮುದ್ರಕ್ಕೆ ಬಂದಿರಬಹುದು ಎಂದು ಊಹಿಸಲಾಗಿದೆ.
ವಲಯ ಅರಣ್ಯಾಧಿಕಾರಿ ಸವಿತಾ ದೇವಾಡಿಗ ಮತ್ತು ಸಿಬ್ಬಂದಿ, ಮೀನುಗಾರರ ಸಹಾಯದಿಂದ ಮೊಸಳೆಯ ಬಾಯಿಕಟ್ಟಿ ಬೋನಿನಲ್ಲಿ ಹಾಕಿ ಸುರಕ್ಷಿತ ಸ್ಥಳದಲ್ಲಿ ಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.