ADVERTISEMENT

ಮನೆಯಲ್ಲಿ ದರೋಡೆ ಮಾಡಿದ್ದ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 15:06 IST
Last Updated 25 ಜನವರಿ 2019, 15:06 IST
ಮುಂಡಗೋಡದಲ್ಲಿ ಈಚೆಗೆ ಮನೆಯೊಂದರಲ್ಲಿ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿ ನಗದು, ಬಂಗಾರ, ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ (ಮುಸುಕುಧಾರಿಗಳು ಆರೋಪಿಗಳು)
ಮುಂಡಗೋಡದಲ್ಲಿ ಈಚೆಗೆ ಮನೆಯೊಂದರಲ್ಲಿ ದರೋಡೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿ ನಗದು, ಬಂಗಾರ, ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ (ಮುಸುಕುಧಾರಿಗಳು ಆರೋಪಿಗಳು)   

ಮುಂಡಗೋಡ:ಇಲ್ಲಿನಟಿಬೆಟನ್‌ ಕ್ಯಾಂಪ್‌ನ ಮನೆಯಲ್ಲಿ ದರೋಡೆ ಮಾಡಿದ್ದ ನಾಲ್ವರುಆರೋಪಿಗಳನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಒಬ್ಬ ತಲೆಮರೆಸಿಕೊಂಡಿದ್ದಾನೆ.

ಪಟ್ಟಣದ ಗಾಂಧಿನಗರದ ವಸಂತ ಕರಿಯಪ್ಪ ಕೊರವರ (28), ಆನಂದನಗರದ ಮಂಜು ಅರ್ಜುನ ನವಲೆ (23), ಕಿರಣ ಪ್ರಕಾಶ ಸೋಳಂಕಿ (23), ಮಧುಸಿಂಗ ಗಂಗಾರಾಮಸಿಂಗ್ ರಜಪೂತ (24) ಬಂಧಿತರು.

ಬಂಧಿತರಿಂದ ₹ 4.50 ಲಕ್ಷ ನಗದು, ₹ 4 ಲಕ್ಷ ಮೌಲ್ಯದ ಬಂಗಾರದ ಆಭರಣ, ಮೂರು ಮೊಬೈಲ್, ಒಂದು ಐಪ್ಯಾಡ್‌, ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್‌ಗಳು, ತಲವಾರ್, ಚಾಕು, ಕಟರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ADVERTISEMENT

‘ದರೋಡೆ ಮಾಡುವ ದೃಶ್ಯಗಳನ್ನು ಸಿನಿಮಾಗಳಲ್ಲಿ ನೋಡಿ ಅದರಂತೆ ಯೋಜನೆ ರೂಪಿಸಿದ್ದಾರೆ. ಮಂಕಿಕ್ಯಾಪ್‌ ಬಳಕೆ ಮಾಡುವುದು, ನಾಯಿಗಳಿಗೆಮೆಣಸಿನ ಪುಡಿಹಾಕುವುದು ಎಲ್ಲವನ್ನೂ ತಿಳಿದುಕೊಂಡಿದ್ದಾರೆ. ದರೋಡೆ ಮಾಡುವುದಕ್ಕೂ ಮೊದಲು ಮೂರು ಸಲ ಬಿಕ್ಕುವಿನ ಮನೆಯನ್ನು ಪರಿಶೀಲಿಸಿದ್ದಾರೆ. ಮನೆಯಲ್ಲಿ ಯಾರು ಇರುತ್ತಾರೆ, ಎಷ್ಟು ಹೊತ್ತಿಗೆ ಮಲಗುತ್ತಾರೆ ಎಂಬುದನ್ನು ತಿಳಿದುಕೊಂಡು ಮುಸುಕುಧಾರಿಗಳಾಗಿ ಬಂದು ಕೃತ್ಯ ಎಸಗಿದ್ದಾರೆ’ ಎಂದು ಶಿರಸಿ ಡಿವೈಎಸ್‌ಪಿ ಜಿ.ಟಿ.ನಾಯಕ ಹೇಳಿದರು.

ಕಳ್ಳರ ಪತ್ತೆಗೆ ಸಹಕಾರಿ:ದರೋಡೆಕೋರರುಮನೆಗೆ ನುಗ್ಗಿದವರೇ, ‘ಹಣ ನೀಡಲು ನಿನ್ನ ಸಹೋದರಿಗೆ ಹೇಳು’ ಎನ್ನುತ್ತ ಬಿಕ್ಕುವಿಗೆ ತಲ್ವಾರ್‌ತೋರಿಸಿ ಬೆದರಿಸಿದ್ದಾರೆ. ಸ್ಥಳೀಯ ಶಬ್ದಗಳನ್ನು ಬಳಕೆ ಮಾಡಿ ಮಾತನಾಡಿದ್ದಾರೆ. ಮನೆಯಲ್ಲಿರುವ ವ್ಯಕ್ತಿ ಸಮವಸ್ತ್ರದಲ್ಲಿ ಇರದಿದ್ದರೂಆತ ಲಾಮಾ ಎಂದೂ, ಮಹಿಳೆ ಈತನ ಸಹೋದರಿ ಎಂದು ಅವರೇ ಮಾತನಾಡಿದ್ದಾರೆ. ಇದಲ್ಲದೇ ಘಟನೆ ನಡೆಯುವುದಕ್ಕೆ ಒಂದೆರೆಡು ದಿನ ಮೊದಲು ಅನುಮಾನಸ್ಪದವಾಗಿ ಓಡಾಡಿರುವ ಮಾಹಿತಿ ಲಭಿಸಿತ್ತು. ಇದರಿಂದ ಆರೋಪಿಗಳ ಪತ್ತೆಯಾಗಿದೆ ಎನ್ನಲಾಗಿದೆ.

ಆರೋಪಿಗಳತಂಡವನ್ನು ಪತ್ತೆ ಮಾಡಿದ ತಂಡಕ್ಕೆ ಹಾಗೂ ಖಚಿತ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಲಾಗಿದೆ. ಸಿಪಿಐ ಶಿವಾನಂದ ಚಲವಾದಿ, ಪಿಎಸ್‌ಐ ಪ್ರೇಮನಗೌಡ ಪಾಟೀಲ, ಎಎಸ್‌ಐ ಎಸ್‌.ವಿ.ಚವ್ಹಾಣ, ಸಿಬ್ಬಂದಿ ಎ.ಆರ್‌.ರಾಠೋಡ, ಜಿ.ರಾಘವೇಂದ್ರ, ವಿನಾಯಕ ಗೌಡ, ಕುಮಾರ ಬಣಕಾರ, ಭಗವಾನ ಗಾಂವಕರ್‌, ವಿನೋದಕುಮಾರ, ಉಮೇಶ ತುಂಬರಗಿ, ಧರ್ಮರಾಜ ನಾಯಕ, ಎಸ್‌.ಶಿವರಾಜ, ಶಫಿ, ಚಂದ್ರು ಕೊರವರ, ಪ್ರಶಾಂತ ಪಾವಸ್ಕರ್, ನಾಗಪ್ಪ ಲಮಾಣಿ, ನಾಗರಾಜು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.