ADVERTISEMENT

ದಾಂಡೇಲಿ: ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 15:54 IST
Last Updated 8 ಏಪ್ರಿಲ್ 2025, 15:54 IST
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಖಂಡಿಸಿ ದಾಂಡೇಲಿ ಬಿಜೆಪಿ ಮಂಡಲ ವತಿಯಿಂದ ನಗರದ ಶಿವಾಜಿ ಸರ್ಕಲ್ ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಖಂಡಿಸಿ ದಾಂಡೇಲಿ ಬಿಜೆಪಿ ಮಂಡಲ ವತಿಯಿಂದ ನಗರದ ಶಿವಾಜಿ ಸರ್ಕಲ್ ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು   

ದಾಂಡೇಲಿ: ರಾಜ್ಯದ ಕಾಂಗ್ರೆಸ್ ಪಕ್ಷದ ಸರ್ಕಾರದ ಜನವಿರೋಧಿ ಧೋರಣೆ ನೀತಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಮಂಡಲ ಅಧ್ಯಕ್ಷ ಬುದವಂತಗೌಡ ಪಾಟೀಲ ನೇತೃತ್ವದಲ್ಲಿ ಮಂಗಳವಾರ ನಗರದ ಶಿವಾಜಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಬುದವಂತಗೌಡ ಪಾಟೀಲ, ಬಸವರಾಜ ಕಲ್ಲಶೆಟ್ಟಿ. ರವಿ ಗಾಂವಕರ್ ಮಾತನಾಡಿ, ಭ್ರಷ್ಟ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಜನಸಾಮಾನ್ಯರ ಬದುಕನ್ನು ದುಸ್ಥಿತಿಗೆ ತಳ್ಳಿದ ಇಂತಹ ಸರ್ಕಾರವನ್ನು ಕಿತ್ತೊಗೆಯಬೇಕು ಎಂದರು.

ಮುಖಂಡರುಗಳಾದ ಸುಧಾಕರ ರೆಡ್ಡಿ, ಬಸವರಾಜ ಕಲಶೆಟ್ಟಿ, ಮಿಥುನ ನಾಯ್ಕ, ಗಿರೀಶ್ ಠೋಸೂರು, ಚನ್ನಬಸಪ್ಪ ಮುರಗೋಡ, ರಮೇಶ ಹೊಸಮನಿ, ಸಂತೋಷ ಬುಲಬುಲೆ, ಸಾವಿತ್ರಿ ಬಡಿಗೇರ, ಪದ್ಮಜಾ ಪ್ರವೀಣ ಜನ್ನು, ರಮಾ ರವಿಂದ್ರ, ರವಿ ವಾಟ್ಲೇಕರ,ಪ್ರಶಾಂತ ಬಸುತೆಕರ, ಈರಯ್ಯಾ ಸಾಲಿಮಠ,ಪುನೀತ್ ನಾಯಕ ಪಕ್ಷದ ಕಾರ್ಯಕರ್ತರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.