ADVERTISEMENT

ದಾಂಡೇಲಿ: ಕ್ರಿಕೆಟ್ ಶಿಬಿರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 14:32 IST
Last Updated 11 ಏಪ್ರಿಲ್ 2025, 14:32 IST
ದಾಂಡೇಲಿ ಕ್ರಿಕೆಟ್ ಅಕಾಡೆಮಿ ವತಿಯಿಂದ ಏರ್ಪಡಿಸಿದ ಬೇಸಿಗೆ ಕ್ರೀಕೆಟ್ ತರಬೇತಿಯ ಶಿಬಿರಕ್ಕೆ ಕ್ರೀಡಾ ತರಬೇತುದಾರ ಶಿವಾಜಿ ವಡ್ಡರ ಈಚೆಗೆ ಚಾಲನೆ ನೀಡಿದರು
ದಾಂಡೇಲಿ ಕ್ರಿಕೆಟ್ ಅಕಾಡೆಮಿ ವತಿಯಿಂದ ಏರ್ಪಡಿಸಿದ ಬೇಸಿಗೆ ಕ್ರೀಕೆಟ್ ತರಬೇತಿಯ ಶಿಬಿರಕ್ಕೆ ಕ್ರೀಡಾ ತರಬೇತುದಾರ ಶಿವಾಜಿ ವಡ್ಡರ ಈಚೆಗೆ ಚಾಲನೆ ನೀಡಿದರು   

ದಾಂಡೇಲಿ: ಬೇಸಿಗೆ ರಜೆಯನ್ನು ಅರ್ಥಪೂರ್ಣ ಹಾಗೂ ಮಕ್ಕಳ ಮೊಬೈಲ್ ಚಟ ಬಿಡಿಸಲು ಮಕ್ಕಳ ಕ್ರೀಡಾ ಭವಿಷ್ಯಕ್ಕೆ ನಿರ್ಮಾಣಕ್ಕೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಕ್ರೀಡಾ ತರಬೇತಿ ಸಹಕಾರಿಯಾಗಿದೆ ಎಂದು ರಾಜ್ಯ ಕ್ರಿಕೆಟ್ ತರಬೇತಿದಾರ ಶಿವಾಜಿ ವಡ್ಡರ ಹೇಳಿದರು.

ನಗರದ ಬಂಗೂರುನಗರ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ದಾಂಡೇಲಿ ಕ್ರಿಕೆಟ್ ಅಕಾಡೆಮಿ ವತಿಯಿಂದ ‘ಸಮ್ಮರ್ ಲೆದರ್ ಬಾಲ್ ಕ್ರಿಕೆಟ್ ಕೋಚಿಂಗ್’ ಶಿಬಿರಕ್ಕೆ ಈಚೆಗೆ ಚಾಲನೆ ನೀಡಿ ಮಾತನಾಡಿದರು.

ಆಸಕ್ತಿ ಮತ್ತು ಪರಿಶ್ರಮ ಇದ್ದಲ್ಲಿ ಯಶಸ್ಸು ಸಾಧ್ಯ. ಈ ಭಾಗದ ಮಕ್ಕಳನ್ನು ಅತ್ಯುತ್ತಮ ಕ್ರಿಕೆಟರನ್ನಾಗಿ ರೂಪಿಸುವ ಉದ್ದೇಶದೊಂದಿಗೆ ದಾಂಡೇಲಿ ಕ್ರಿಕೆಟ್ ಅಕಾಡೆಮಿ ರಚನೆಯಾಗಿದ್ದು, ಈ ಕ್ರಿಕೆಟ್‌ ಅಕಾಡೆಮಿ ಭವಿಷ್ಯದಲ್ಲಿ ಕ್ರೀಡಾ ಕ್ಷೇತ್ರಕ್ಕೆ ಮಹತ್ವದ ಶಕ್ತಿಯಾಗಲಿದೆ ಎಂದರು.

ADVERTISEMENT

ಮುಖ್ಯ ಅತಿಥಿಗಳಾಗಿ ನಗರಸಭೆಯ ಅಧ್ಯಕ್ಷ ಅಶ್ಫಾಕ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ನಗರಸಭೆ ಸದಸ್ಯ ಸಂಜಯ ನಂದ್ಯಾಳರ, ವೆಸ್ಟ್ ಕೋಸ್ಟ್ ಪೇಪರ್ ಮಿಲ್ ನ ಸಾರ್ವಜನಿಕ ಸಂಪರ್ಕಾಧಿಕಾರಿ ರಾಘವೇಂದ್ರ ಜೆ.ಆರ್., ಬಂಗೂರುನಗರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಎಲ್. ಗುಂಡೂರು, ಪಿಎಸ್‌ಐಗಳಾದ ಅಮೀನ್ ಅತ್ತಾರ, ಕಿರಣ್ ಪಾಟೀಲ್ ಮಾತನಾಡಿದರು.

ದಾಂಡೇಲಿ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಅನಿಲ್ ಪಾಟೇಕರ, ಉಪಾಧ್ಯಕ್ಷ ರಾಜೇಶ ತಿವಾರಿ ಹಾಗೂ ಸದಸ್ಯರುಗಳಾದ ಪ್ರಕಾಶ್ ಜೈನ, ಪ್ರವೀಣ ಮಿಶ್ರಾ, ಸುಭಾಷ ಪ್ರಧಾನ, ಹೇಮಂತ, ನಿರ್ಮಲಾ ಅಂಕನವರ್, ಸಮ್ಯುವೆಲ್ ಎಂ. ಹನುಮಾನ ಶರ್ಮಾ, ಮಹೇಂದ್ರ ಶರ್ಮಾ, ರಚನಾ ಶರ್ಮಾ ಇದ್ದರು.

ಲೆದರ್ ಬಾಲ್ ಕ್ರಿಕೆಟ್ ಕೋಚಿಂಗ್ ಶಿಬಿರದಲ್ಲಿ ಒಟ್ಟು 140 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.