ದಾಂಡೇಲಿ: ನಗರದ ಹಳೇ ನಗರಸಭೆ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಗರಸಭೆಯ ಅಧ್ಯಕ್ಷ ಅಶ್ಫಾಕ್ ಶೇಖ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಅವರು, ನಗರದ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಿ ಯುಜಿಡಿ, ನಿರಂತರ ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ನಗರದ ಪ್ರಮುಖ ರಸ್ತೆ ಡಾಂಬರೀಕರಣ, ರಸ್ತೆಗಳ ಬದಿಯ ಅಲಂಕಾರ ವಿದ್ಯುತ್ ದೀಪಗಳು ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದರು.
ಉಪಾಧ್ಯಕ್ಷೆ ಶಿಲ್ಪಾ ಕೊಡೆ, ಸುಧಾ ಜಾಧವ, ತಹಶೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತ ವಿವೇಕ ಬನ್ನೆ, ಟಿ.ಸಿ.ಹಾದಿಮನಿ, ಡಿವೈಎಸ್‌ಪಿ ಶಿವಾನಂದ ಮದರಖಂಡಿ, ಬಿ.ಎನ್.ವಾಸರೆ ಇದ್ದರು. ಶಿಕ್ಷಕ ಶಾಂತಾರಾಮ ನಾಯ್ಕ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ನಗರದ ವಿವಿಧ ಶಾಲಾ ಕಾಲೇಜು, ಕಚೇರಿಗಳಲ್ಲಿ, ಪಕ್ಷಗಳ ಕಚೇರಿಗಳಲ್ಲಿ ಸಂಭ್ರಮದಸ್ವಾತಂತ್ರ್ಯೋತ್ಸವ ಆಚರಣೆ: ತಹಶೀಲ್ದಾರ್ ಕಚೇರಿ, ನಗರಸಭೆ, ನಾಡಕಚೇರಿ, ತಾಲ್ಲೂಕು ಆಡಳಿತ ಕಚೇರಿ, ಸರ್ಕಾರಿ ಪದವಿ ಪೂರ್ವ ಮತ್ತು ಪದವಿ ಕಾಲೇಜು, ಬಂಗೂರನಗರ ಪದವಿ ಮತ್ತು ಪೂರ್ವ ಕಾಲೇಜು, ಜನತಾ ವಿದ್ಯಾಲ, ಬಿಜೆಪಿ ಪಕ್ಷದ ಕಚೇರಿ, ಕಾಂಗ್ರೆಸ್ ಪಕ್ಷದ ಕಚೇರಿ ಮುಂತಾದವುಗಳಲ್ಲಿ ಮುಖ್ಯಸ್ಥರು ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯೋತ್ಸವ ಆಚರಿಸಿದರು.
ಡಾಂಡೇಲಿ ನಗರದ ಲೆನಿನ್ ರಸ್ತೆಯ ಅಕ್ಷಯ ಸಹಕಾರ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸೊಸೈಟಿಯ ಸ್ಥಳೀಯ ನಿರ್ದೇಶಕ ಸಂತಾನ್ ಸಾವಂತ್ ಧ್ವಜಾರೋಹಣ ನೆರವೇರಿಸಿದರು. ವಕೀಲರಾದ ಅಡ್ವೊಕೆಟ್ ಎಂ.ಸಿ. ಹೆಗ್ಡೆ ಮಾತನಾಡಿದರು.
ದಾಂಡೇಲಿ ತಾಲ್ಲೂಕಿನ ಅಂಬಿಕಾನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಗದಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮುಖ್ಯ ಶಿಕ್ಷಕಿ ತೇಜಸ್ವಿನಿ ನಾಯ್ಕ್ ಅಘನಾಶಿನಿ, ರವರು ಧ್ವಜಾರೋಹಣ ನೆರವೇರಿಸಿದರು. ಆಮಿನಾ ಕೆ.ಎಂ. ಹಿಂಬ್ರಾನ್, ಡುಮಿಂಗ ಜುಜೆ ಸಿದ್ದಿ, ಬಸ್ತ್ಯಂವ ಸಿದ್ದಿ, ಅಗೊಸ್ತಿನ, ಶಿಮಣ್ಣಾ, ಠಕ್ಕಪ್ಪಾ ಇದ್ದರು.
ಜಿಲ್ಲಾ ಕಸಾಪದಿಂದ ಸ್ವಾತಂತ್ರ್ಯೋತ್ಸವ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಧ್ವಜಾರೋಹಣ ನೆರವೇರಿಸಿದರು. ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ, ಆನೆ ಹೊಸೂರ, ದಾಂಡೇಲಿ ತಾಲೂಕು ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಮಂತ ಮದರಿ, ಪ್ರಮುಖರಾದ ಮೋಹನ ಹಲವಾಯಿ, ಕೀರ್ತಿ ಗಾಂವ್ಕರ, ಆರ್.ಪಿ. ನಾಯ್ಕ, ಅನಿಲ ನಾಯ್ಕರ, ಎಸ್.ಎಸ್. ಕುರ್ಡೇಕರ, ಬಾಬಣ್ಣ ಶ್ರೀವತ್ಸ,ಸುರೇಶ ಪಾಲನಕರ, ಸುರೇಶ ಕಾಮತ, ರುದ್ರಪ್ಪ ಮುರಗೋಡ, ಶ್ರೀಕಾಂತ ಅಸೋದೆ, ಸಂತೋಷ ಗೂಳೂರ, ಕಲ್ಪನಾ ಪಾಟೀಲ, ಜಲಜಾ ವಾಸರೆ, ಪೂಜಾ ನಾಯ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.