ADVERTISEMENT

ದಾಂಡೇಲಿ | ಪೊಲೀಸರಿಗೆ ರಾಖಿ ಕಟ್ಟಿ ಹಾರೈಕೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 8:04 IST
Last Updated 11 ಆಗಸ್ಟ್ 2025, 8:04 IST
ದಾಂಡೇಲಿ ನಗರ ಹಾಗೂ ಗ್ರಾಮೀಣ ಠಾಣೆಯ ಸಿಬ್ಬಂದಿ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದರು.
ದಾಂಡೇಲಿ ನಗರ ಹಾಗೂ ಗ್ರಾಮೀಣ ಠಾಣೆಯ ಸಿಬ್ಬಂದಿ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದರು.   

ದಾಂಡೇಲಿ: ನಗರದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಶ್ರೀ ನೇಮತಿ ನೇತೃತ್ವದಲ್ಲಿ ಬಿಜೆಪಿ ಪಕ್ಷದ ವತಿಯಿಂದ ನಗರ ಹಾಗೂ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಕಿರಣ ಪಾಟೀಲ, ಜಗದೀಶ್ ನಾಯ್ಕ, ಶಿವಾನಂದ ನಾವಲಗಿ, ಅಮೀನ್ ಅತ್ತಾರ ಸೇರಿದಂತೆ ಸಿಬ್ಬಂದಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ವಿಶೇಷ ಆಹ್ವಾನಿತರಾದ ಶಾರದ ಪರಶುರಾಮ, ಜಿಲ್ಲಾ ಮಹಿಳಾ‌ ಮೊರ್ಚಾ ಪ್ರಧಾನ ಕಾರ್ಯದರ್ಶಿ ಗೀತಾ ಶಿಕಾರಿಪುರ, ಸದಸ್ಯರಾದ ದೇವಕ್ಕ ಕೆರಿಮನಿ, ಮಂಡಲ ಉಪಾಧ್ಯಕ್ಷೆ ಸುಜಾತಾ ಗಡದ, ಭವಾನಿ ರಾಟೆ, ಸುಜಾತಾ ಪಾಟೀಲ, ಗೀತಾ ರಾವ್, ಮಹಾದೇವಿ ಬತ್ತೆ, ಶ್ವೇತಾ ಶೆಟ್ಟಿ, ಸುನಂದಾ ಕುಂಬಾರ. ಸುನೀತಾ ಬೈರಹುರುಗಿ, ದಿಶಾ ಆಚಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT