ADVERTISEMENT

ಡಾ.ಹರೀಶ್ ಕುಮಾರ್ ನೂತನ ಜಿಲ್ಲಾಧಿಕಾರಿ

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾಗಿ ನಕುಲ್ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 11:13 IST
Last Updated 21 ಫೆಬ್ರುವರಿ 2019, 11:13 IST
ಎಸ್.ಎಸ್.ನಕುಲ್
ಎಸ್.ಎಸ್.ನಕುಲ್   

ಕಾರವಾರ:ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರನ್ನು ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ. ಅವರಹುದ್ದೆಗೆಚಾಮರಾಜನಗರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಡಾ.ಕೆ.ಹರೀಶ್ ಕುಮಾರ್ ಅವರನ್ನು ನೇಮಿಸಲಾಗಿದೆ.

ಹೆಚ್ಚುವರಿ ಜಿಲ್ಲಾಧಿಕಾರಿಯನ್ನಾಗಿಎಸ್.ನವೀನ್ ಕುಮಾರ್ ರಾಜು ಅಧಿಕಾರ ಸ್ವೀಕರಿಸಲಿದ್ದಾರೆ. ಅವರು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದರು.ಇದೇವೇಳೆ, ಶಿರಸಿಯ ಉಪ ವಿಭಾಗಾಧಿಕಾರಿಯನ್ನಾಗಿ ಈಶ್ವರ ಉಳ್ಳಾಗಡ್ಡಿ ಅವರನ್ನು ನೇಮಮ ಮಾಡಲಾಗಿದೆ ಎಂದುಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆತನ್ನ ಆದೇಶದಲ್ಲಿತಿಳಿಸಿದೆ.

ಜಿಲ್ಲೆಯಲ್ಲಿ ಸುಮಾರು ಎರಡು ವರ್ಷ ಕಾರ್ಯ ನಿರ್ವಹಿಸಿದ ಅನುಭವವನ್ನು ‘ಪ್ರಜಾವಾಣಿ’ ಜತೆ ಗುರುವಾರ ಅವರು ಹಂಚಿಕೊಂಡರು.

ADVERTISEMENT

ಅವಿಸ್ಮರಣೀಯ: ‘ನಾನು ಇಲ್ಲಿ ಇದ್ದಷ್ಟು ದಿನವೂಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಗಿದೆ.ಜನರಿಂದ, ಅಧಿಕಾರಿಗಳಿಂದ, ಮಾಧ್ಯಮದಿಂದ ಉತ್ತಮ ಪ್ರತಿಕ್ರಿಯೆ, ಸಹಕಾರ ಸಿಕ್ಕಿದೆ. ಚುನಾವಣೆಗೆ ಸಂಬಂಧಿಸಿದ ಕಾರ್ಯಕ್ರಮಗಳು, ವಿಶೇಷ ಪಿಂಚಣಿ ಅದಾಲತ್, ಹಾಸ್ಟೆಲ್, ಶಾಲೆಗಳಿಗೆ ಭೂಮಿ ಮಂಜೂರು, ಹಾಸ್ಟೆಲ್‌, ಅಂಗನವಾಡಿಗಳಸುಧಾರಣೆಗೆ ಕ್ರಮ, ಪ್ರವಾಸೋದ್ಯಮ ಅಭಿವೃದ್ಧಿಗೆ ಹಮ್ಮಿಕೊಂಡ ಕಾರ್ಯಕ್ರಮಗಳು ಸ್ಮರಣೀಯವಾಗಿವೆ’ ಎಂದು ತಿಳಿಸಿದರು.

ಕೆಲವನ್ನು ಸಾಧಿಸಲಾಗಲಿಲ್ಲ: ‘ನಾನು ಅಂದುಕೊಂಡ ಹಲವು ಸಂಗತಿಗಳು ಸಾಧನೆಯ ಹಂತದಲ್ಲಿವೆ. ಕೆಲವನ್ನು ಹಲವು ತಾಂತ್ರಿಕ ಕಾರಣಗಳಿಂದ ಆರಂಭಿಸಲು ಸಾಧ್ಯವಾಗಲಿಲ್ಲ. ಪ್ರವಾಸೋದ್ಯಮ ಚಟುವಟಿಕೆಗಳ ಅಭಿವೃದ್ಧಿಗೆ ಹಮ್ಮಿಕೊಂಡ ಕಾರ್ಯಕ್ರಮಗಳು ಕ್ರಮೇಣ ಫಲ ನೀಡಲು ಆರಂಭಿಸಿವೆ. ಘಟ್ಟದ ಮೇಲಿನ ತಾಲ್ಲೂಕುಗಳಲ್ಲೂಇಂತಹ ಪ್ರಯತ್ನಗಳನ್ನು ಮಾಡಲು ಉದ್ದೇಶಿಸಿದ್ದೆವು. ಅದನ್ನು ಆರಂಭಿಸಲಾಗಲಿಲ್ಲ’ ಎಂದು ಹೇಳಿದರು.

ಕೂರ್ಮಗಡ ದುರಂತವೊಂದೇ ಕಹಿ:ಕೂರ್ಮಗಡದ ದೋಣಿ ದುರಂತವೊಂದನ್ನು ಬಿಟ್ಟು ಎಲ್ಲವೂ ಚೆನ್ನಾಗಿತ್ತು. ಚತುಷ್ಪಥ ಹೆದ್ದಾರಿಗೆ ವೇಗ, ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವುದು ತೃಪ್ತಿ ತಂದಿದೆ.ಮಾರ್ಚ್ ತಿಂಗಳಲ್ಲಿ ಮತ್ತೊಮ್ಮೆ ಸಭೆ ಸೇರಿ ಏನೇನು ಸುರಕ್ಷತಾ ಕ್ರಮಗಳನ್ನುಅನುಸರಿಬೇಕುಎಂದು ಚರ್ಚಿಸಬೇಕು. ಹೊಸ ಜಿಲ್ಲಾಧಿಕಾರಿಗೂ ಈ ಮಾಹಿತಿ ನೀಡುತ್ತೇನೆ. ಏಪ್ರಿಲ್, ಮೇನಲ್ಲಿಅಪಾಯ ಆಗಬಹುದಾದ ಜಾಗವನ್ನು ಪತ್ತೆಹಚ್ಚಲುಸಾಧ್ಯವಾಗುತ್ತದೆ. ಜೂನ್‌ವೇಳೆಗೆ ಕ್ರಮ ಕೈಗೊಳ್ಳಬಹುದಾಗಿದೆ’ ಎಂದು ವಿವರಿಸಿದರು.

‘ಪ್ರಯತ್ನಗಳಿಗೆ ಫಲ ಸಿಕ್ಕಿದೆ’: ಕಂದಾಯ ಇಲಾಖೆಯಲ್ಲಿ ನಾಡಕಚೇರಿ, ಇ–ಕ್ಷಣ, ಭೂಮಿ ತಂತ್ರಾಂಶಗಳಬಳಕೆಯಲ್ಲಿ ಜಿಲ್ಲೆಯು ಟಾಪ್ 3ನಲ್ಲಿದೆ. ನಿರಂತರ ಪ್ರಯತ್ನಗಳಿಂದ ಈ ಫಲಿತಾಂಶ ಸಿಕ್ಕಿದೆ ಎಂದು ನಕುಲ್ ಹೇಳಿದರು.

ಜಿಲ್ಲಾಧಿಕಾರಿಯಾಗಿ ಪಡೆದ ಅನುಭವಗಳು ಬೆಂಗಳೂರಿನಲ್ಲಿ ನಿರ್ದೇಶಕರ ಮಟ್ಟದ ಜವಾಬ್ದಾರಿಗಳನ್ನು ನಿಭಾಯಿಸಲು ಸಹಾಯಕ್ಕೆ ಬರುತ್ತವೆ. ಇವು ಐ.ಟಿ–ಬಿ.ಟಿ ಕ್ಷೇತ್ರದ ಹೊಸ ಯೋಜನೆಗಳನ್ನು ಜಾರಿ ಮಾಡಲು ಅನುಕೂಲವಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.