ADVERTISEMENT

ದೇವಳಮಕ್ಕಿ: ದತ್ತಾತ್ರೇಯ ದೇವರ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 13:45 IST
Last Updated 12 ಏಪ್ರಿಲ್ 2019, 13:45 IST
ಕಾರವಾರ ತಾಲ್ಲೂಕಿನ ದೇವಳಮಕ್ಕಿ ಗ್ರಾಮದಲ್ಲಿ ಶ್ರೀ ದತ್ತಾತ್ರೇಯ ದೇವರ ರಥೋತ್ಸವ ಗುರುವಾರ ರಾತ್ರಿ ಅದ್ಧೂರಿಯಾಗಿ ನೆರವೇರಿತು
ಕಾರವಾರ ತಾಲ್ಲೂಕಿನ ದೇವಳಮಕ್ಕಿ ಗ್ರಾಮದಲ್ಲಿ ಶ್ರೀ ದತ್ತಾತ್ರೇಯ ದೇವರ ರಥೋತ್ಸವ ಗುರುವಾರ ರಾತ್ರಿ ಅದ್ಧೂರಿಯಾಗಿ ನೆರವೇರಿತು   

ಕಾರವಾರ:ತಾಲ್ಲೂಕಿನ ದೇವಳಮಕ್ಕಿ ಗ್ರಾಮದಲ್ಲಿ ಶ್ರೀ ದತ್ತಾತ್ರೇಯ ದೇವರ ರಥೋತ್ಸವ ಏ.11 ಮತ್ತು 12ರಂದು ಅದ್ಧೂರಿಯಾಗಿ ನೆರವೇರಿತು. 11ರಂದು ಬೆಳಿಗ್ಗೆ 8ಕ್ಕೆ ಭಕ್ತರಿಂದ ಭಿಕ್ಷಾಟನೆ ನಡೆಸಲಾಯಿತು.

ದೇವರರಿಗೆ ಪಂಚಾಮೃತ ಅಭಿಷೇಕ, ರಥಾರೋಹಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಮಹಾಮಂಗಳಾರತಿ ನಡೆಸಿ ನಂತರ ಸಾರ್ವಜನಿಕ ಅನ್ನಸಂತರ್ಪಣೆಹಮ್ಮಿಕೊಳ್ಳಲಾಯಿತು. ರಥವು ದೇವಳಮಕ್ಕಿ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿತು. ಈ ಸಂದರ್ಭದಲ್ಲಿ ಶಾಸಕಿ ರೂಪಾಲಿ ನಾಯ್ಕ ಕೂಡ ಭಾಗವಹಿಸಿದ್ದರು. ನಂತರ ದೇವರ ಮಹಾಪೂಜೆ ನಡೆಸಲಾಯಿತು.

ಹಣಕೋಣದ ಸಾಕಾರ ನಾಟಕ ಸಂಘದಿಂದ ‘ಸಕಾ ತುಕಾ ರಾಮ ರಾಮ’ ಎಂಬ ಕೊಂಕಣಿ ಕೌಟುಂಬಿಕ ಸಾಮಾಜಿಕ ನಾಟಕ ಪ್ರದರ್ಶನ ಏರ್ಪಡಿಸಲಾಯಿತು. 12ರಂದು ಧಯಕಾಲೋ ನೆರವೇರಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.