ADVERTISEMENT

ಪಾದಯಾತ್ರೆಯಲ್ಲಿ ತೆರಳಿ ದೇವರ ದರ್ಶನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 12:11 IST
Last Updated 4 ಮಾರ್ಚ್ 2019, 12:11 IST
ಮಹಾಶಿವರಾತ್ರಿ ನಿಮಿತ್ತ ಭಟ್ಕಳದ ರಂಜನ್ ಇಂಡೇನ್ ಏಜೆನ್ಸಿ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮುರ್ಡೇಶ್ವರಕ್ಕೆ ಪಾದಯಾತ್ರೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡರು
ಮಹಾಶಿವರಾತ್ರಿ ನಿಮಿತ್ತ ಭಟ್ಕಳದ ರಂಜನ್ ಇಂಡೇನ್ ಏಜೆನ್ಸಿ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮುರ್ಡೇಶ್ವರಕ್ಕೆ ಪಾದಯಾತ್ರೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡರು   

ಭಟ್ಕಳ: ಮಹಾಶಿವರಾತ್ರಿ ನಿಮಿತ್ತ ಇಲ್ಲಿಂದ ಮುರ್ಡೇಶ್ವರಕ್ಕೆಸೋಮವಾರ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು.ಒಂಬತ್ತನೇವರ್ಷದ ಪಾದಯಾತ್ರೆಯಲ್ಲಿಮಕ್ಕಳು, ಮಹಿಳೆಯರೂ ಭಾಗವಹಿಸಿದ್ದರು.

ರಂಜನ್ ಇಂಡೇನ್ ಏಜೆನ್ಸಿ ಸಹಯೋಗದಲ್ಲಿ ಬೆಳಿಗ್ಗೆ 4ರ ಸುಮಾರಿಗೆ ಪಟ್ಟಣದ ಚೋಳೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಆರಂಭಿಸಲಾಯಿತು. ಶಿವನಾಮ ಸ್ಮರಣೆ, ಶಿವಸ್ತುತಿಯೊಂದಿಗೆ ಬರಿಗಾಲಿನಲ್ಲಿ ನಡೆದುಕೊಂಡು ಹೋದರು. ಯಾತ್ರೆಯ ಕೊನೆಯಲ್ಲಿ ತ್ರಿವರ್ಣ ಧ್ವಜ ಹಿಡಿದು ಪುಲ್ವಾಮದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದರು.

ಯಾತ್ರಿಕರಿಗೆ ಲಘು ಉಪಾಹಾರ ಹಾಗೂ ವಾಪಸ್ ಬರಲು ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ರಂಜನ್ ಇಂಡೇನ್ ಏಜೆನ್ಸಿಯ ಶಿವಾನಿ ಶಾಂತಾರಾಮ, ಹಾಗೂ ಶಾಂತಾರಾಮ ಭಟ್ಕಳ್ ಯಾತ್ರೆಯ ನೇತೃತ್ವ ವಹಿಸಿದ್ದರು. ನಗರಠಾಣೆ ಪಿಎಸ್ಐ ಕುಸುಮಾಧರ ಮತ್ತು ಸಿಬ್ಬಂದಿ ಯಾತ್ರೆ ಸಾಗುವ ದಾರಿಯಲ್ಲಿ ಬಂದೋಬಸ್ತ್ ಏರ್ಪಡಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.