ADVERTISEMENT

ಅಭಿವೃದ್ಧಿ ಕಾರ್ಯ ಕುರಿತು ನಿವಾಸಿಗಳೊಂದಿಗೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 15:42 IST
Last Updated 13 ಜೂನ್ 2025, 15:42 IST
 ಸಿದ್ದಾಪುರದ ಇಂದಿರಾನಗರಕ್ಕೆ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ ಕುಂದುಕೊರತೆಗಳನ್ನು ಪರಿಶೀಲಿಸಿದರು.
 ಸಿದ್ದಾಪುರದ ಇಂದಿರಾನಗರಕ್ಕೆ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ ಕುಂದುಕೊರತೆಗಳನ್ನು ಪರಿಶೀಲಿಸಿದರು.   

ಸಿದ್ದಾಪುರ: ಪಟ್ಟಣದ ಇಂದಿರಾನಗರಕ್ಕೆ ಶಾಸಕ ಭೀಮಣ್ಣ ನಾಯ್ಕ ಶುಕ್ರವಾರ ಭೇಟಿ ನೀಡಿ ಅಲ್ಲಿನ ಕುಂದುಕೊರತೆ ಪರಿಶೀಲಿಸಿ, ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಅಲ್ಲಿನ ನಿವಾಸಿಗಳೊಂದಿಗೆ ಚರ್ಚಿಸಿದರು.

ರಸ್ತೆ ದುರಸ್ತಿ, ಗಟಾರ ನಿರ್ಮಾಣ ಮುಂತಾದ ಅಗತ್ಯ ಅಭಿವೃದ್ಧಿಗಳ ಕುರಿತು ಶಾಸಕರಿಗೆ ಅಹವಾಲು ಸಲ್ಲಿಸಲಾಯಿತು. ಎಲ್ಲವನ್ನೂ ಪರಿಶೀಲಿಸಿದ ಭೀಮಣ್ಣ ನಾಯ್ಕ ನಿವಾಸಿಗಳ ಬೇಡಿಕೆಯನ್ನು ಆದ್ಯತೆಯ ಮೇರೆಗೆ ಈಡೇರಿಸುವುದಾಗಿ ತಿಳಿಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜೆ.ಆರ್. ನಾಯ್ಕ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಕಮಿಟಿ ಅಧ್ಯಕ್ಷ ಕೆ.ಜಿ. ನಾಗರಾಜ, ವಸಂತ ನಾಯ್ಕ ಮನಮನೆ, ಪ್ರಮುಖರಾದ ಮಾರುತಿ ಕಿಂದ್ರಿ, ಅಣ್ಣಪ್ಪ ನಾಯ್ಕ ಶಿರಳಗಿ, ಇಂದಿರಾ ನಗರದ ನಿವಾಸಿಗಳಾದ ಸಿ.ಎಸ್.ಗೌಡರ್, ಎನ್.ವಿ.ಹೆಗಡೆ, ವಿ.ಎಸ್.ಹೆಗಡೆ, ಜೈರಾಮ ನಾಯ್ಕ ಹೆಗ್ಗಾರಕೈ, ಪಿ.ಎಸ್.ಹೆಗಡೆ, ಗಂಗಾಧರ ಕೊಳಗಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.