ಕಾರವಾರ:ಈ ಬಾರಿಯ ‘ಕದಂಬೋತ್ಸವ’ಕ್ಕೆ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ ದೇಗುಲಗಳಿಂದ ದೇಣಿಗೆ ಸಂಗ್ರಹಿಸುವಂತೆ ಹೊರಡಿಸಿದ್ದ ಆದೇಶವನ್ನು ಜಿಲ್ಲಾಡಳಿತವು ಮಂಗಳವಾರ ವಾಪಸ್ ಪಡೆದಿದೆ.
ಜಿಲ್ಲೆಯ ‘ಎ’ ಮತ್ತು ‘ಬಿ’ಪ್ರವರ್ಗಗಳ ದೇವಸ್ಥಾನಗಳಿಂದಉತ್ಸವಕ್ಕೆ ತಲಾ ₹ 1 ಲಕ್ಷ ಮತ್ತು ‘ಸಿ’ ಪ್ರವರ್ಗದ ದೇವಸ್ಥಾನಗಳಿಂದ ತಲಾ ₹ 10 ಸಾವಿರ ದೇಣಿಗೆ ಸಂಗ್ರಹಿಸುವಂತೆ ಎಲ್ಲ ತಹಶೀಲ್ದಾರ್‌ಗಳಿಗೆ ಪತ್ರ ಬರೆಯಲಾಗಿತ್ತು. ಜಿಲ್ಲಾಡಳಿತ ಈ ನಡೆಗೆ ವ್ಯಾಪಕ ಟೀಕೆ ಹಾಗೂ ವಿರೋಧ ವ್ಯಕ್ತವಾಗಿತ್ತು. ದೇವಸ್ಥಾನಗಳ ಆದಾಯವನ್ನು ಅವುಗಳ ಅಭಿವೃದ್ಧಿಗೆ ಮಾತ್ರ ಬಳಸಬೇಕು ಎಂದೂ ಹಲವರುಆಗ್ರಹಿಸಿದ್ದರು.
ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ತನ್ನ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂಪಡೆದು ತಹಶೀಲ್ದಾರರಿಗೆ ಪತ್ರ ರವಾನಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.