ADVERTISEMENT

ಶಿರಸಿ: 18 ಶಿಕ್ಷಕರಿಗೆ ಜಿಲ್ಲಾ ಮಟ್ಟದ ‘ಉತ್ತಮ ಶಿಕ್ಷಕ’ ಗೌರವ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 13:58 IST
Last Updated 3 ಸೆಪ್ಟೆಂಬರ್ 2021, 13:58 IST

ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ 2021-22ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಶುಕ್ರವಾರ 18 ಜನರಿಗೆ ಘೋಷಿಸಲಾಗಿದೆ.

ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ತಲಾ 6 ಮಂದಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು ತಲಾ ₹5 ಸಾವಿರ ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿರಲಿದೆ. ಸೆ.5ರಂದು ಶಿರಸಿ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸಲಾಗುವುದು ಎಂದು ಡಿಡಿಪಿಐ ದಿವಾಕರ ಶೆಟ್ಟಿ ತಿಳಿಸಿದ್ದಾರೆ.

ಕಿರಿಯ‌ ಪ್ರಾಥಮಿಕ ಶಾಲೆ ವಿಭಾಗ: ಶಿರಸಿ ತಾಲ್ಲೂಕು ತೆಪ್ಪಗಿ ಶಾಲೆಯ ನಾಗರಾಜ ವಿ.ನೀಲೆಕಣಿ, ಸಿದ್ದಾಪುರ ಸುಂಕತ್ತಿಯ ಲಲಿತಾ ಜಿ.ಹೆಗಡೆ, ಯಲ್ಲಾಪುರ ಶೀಗೆಕೇರಿಯ ನಾರಾಯಣ ಎಸ್.ಭಟ್, ಮುಂಡಗೋಡ ಗೋದ್ನಾಳದ ಲೋಕೇಶ ಜಿ.ನಾಯ್ಕ, ಹಳಿಯಾಳ ಹನೋಡಾದ ರಾಮಪ್ಪ ಸಿದ್ಧರ, ಜೋಯಿಡಾ ಕರಂಜೆಯ ಛಾಯಾ ಎಸ್.ಡೇರಿಯೆಕರ.

ADVERTISEMENT

ಹಿರಿಯ ಪ್ರಾಥಮಿಕ ಶಾಲೆ ವಿಭಾಗ: ಶಿರಸಿ ಹೆಗಡೆಕಟ್ಟಾ ಶಾಲೆಯ ಸತೀಶ ಜಿ. ಹೆಗಡೆ, ಸಿದ್ದಾಪುರ ಬೇಡ್ಕಣಿಯ ಕೆ.ಪಿ. ರವಿ, ಯಲ್ಲಾಪುರ ಇಡಗುಂದಿಯ ಗಣಪತಿ ಎಚ್. ಗೌಡ, ಮುಂಡಗೋಡ ಉಮ್ಮಚಗಿಯ ಡಿ. ಅನುಪಮಾ, ಹಳಿಯಾಳ ಕೇರವಾಡದ ಶ್ರೀನುವಾಸರಾವ ಎಸ್. ನಾವಲಿ, ಜೋಯಿಡಾ ಕಾಳಸಾಯಿಯ ಶಕುಂತಲಾ ಮಾಧವ ಶಾನಭಾಗ.

ಪ್ರೌಢಶಾಲೆ ವಿಭಾಗ: ಶಿರಸಿ ಆವೆಮರಿಯಾ ಪ್ರೌಢಶಾಲೆಯ ಕಿರಣ ಫರ್ನಾಂಡಿಸ್, ಸಿದ್ದಾಪುರ ಹಳ್ಳಿಬೈಲ್ ಸರ್ಕಾರಿ ಪ್ರೌಢಶಾಲೆಯ ರಾಘವೇಂದ್ರ ನಾಯ್ಕ, ಯಲ್ಲಾಪುರ ಮಲವಳ್ಳಿ ಸರ್ಕಾರಿ ಪ್ರೌಢಶಾಲೆಯ ಸಂತೋಷ ಜಿ. ಶೆಟ್ಟಿ, ಮುಂಡಗೋಡ ಅಂದಲಗಿ ಸರ್ಕಾರಿ ಪ್ರೌಢಶಾಲೆಯ ವೀರಪ್ಪ ಎಚ್. ಜಾವಳ್ಳಿ, ಹಳಿಯಾಳ ತೇರಗಾಂವ ಪ್ರೌಢಶಾಲೆಯ ಗುರುನಾಥ ಎಸ್. ಹೆಗಡೆ, ಜೋಯಿಡಾ ಬಾಪೇಲಿ ಕ್ರಾಸ್ ಸರ್ಕಾರಿ ಪ್ರೌಢಶಾಲೆಯ ಗೋವಿಂದ ಎಂ.ಅಂಬಿಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.