ADVERTISEMENT

ಮುಖ್ಯಮಂತ್ರಿ ಮಾತಿಗೆ ಅಪಾರ್ಥ ಕಲ್ಪಿಸಬಾರದು: ಸಚಿವ ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 6:53 IST
Last Updated 7 ಜೂನ್ 2021, 6:53 IST
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ   

ಶಿರಸಿ: ಪಕ್ಷದ ಜವಾಬ್ದಾರಿಯುತ ಕಾರ್ಯಕರ್ತರಾಗಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಬದಲಾವಣೆ ಕುರಿತು ಮಾತನಾಡಿದ್ದಾರೆ. ಅವರ ಹೇಳಿಕೆಗೆ ಅಪಾರ್ಥ ಕಲ್ಪಿಸಬಾರದು ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ನಗರದಲ್ಲಿ ಮಾಧ್ಯಮದವರೊಡನೆ ಸೋಮವಾರ ಮಾತನಾಡಿದ ಅವರು, 'ವಯಸ್ಸಿನ ಆಧಾರದ ಮೇಲೆ ಮನುಷ್ಯನ ಅಧಿಕಾರ ನಿರ್ಬಂಧಿಸಲಾಗದು. ಅವರ ಕೆಲಸ, ಚಟುವಟಿಕೆ ಮೇಲೆ ನಿರ್ಧರಿಸಬೇಕು. ರಾಜ್ಯದಲ್ಲಿ 75 ವರ್ಷ ದಾಟಿದ ಮೇಲೂ ಅಧಿಕಾರ ನಡೆಸಿದ ಸಾಕಷ್ಟು ಮುಖ್ಯಮಂತ್ರಿಗಳು ಆಗಿ ಹೋಗಿದ್ದಾರೆ' ಎಂದರು.

'ಎಲ್ಲ ಸಚಿವರು, ಶಾಸಕರು ಮುಖ್ಯಮಂತ್ರಿ ಬೆಂಬಲಕ್ಕಿದ್ದೇವೆ. ಸರ್ಕಾರವನ್ನು ಅವರೇ ಇನ್ನಷ್ಟು ವರ್ಷ ಮುನ್ನಡೆಸಲಿದ್ದಾರೆ' ಎಂದರು.

ADVERTISEMENT

'ವಯಸ್ಸನ್ನೂ ಲೆಕ್ಕಿಸದೆ ಕೋವಿಡ್ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಮಂತ್ರಿ ಮಂಡಲ ಬದಲಾವಣೆ ವಿಚಾರ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು.ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.