ADVERTISEMENT

ಬದನಗೋಡಿನಲ್ಲಿ ಕಾಡಾನೆ ಹಿಂಡು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2019, 14:33 IST
Last Updated 7 ನವೆಂಬರ್ 2019, 14:33 IST
ಶಿರಸಿ ತಾಲ್ಲೂಕಿನ ಬದನಗೋಡಿನ ಅನಾನಸ್ ಗದ್ದೆಯಲ್ಲಿ ಕಾಣಿಸಿಕೊಂಡಿದ್ದ ಆನೆಗಳ ಹಿಂಡು
ಶಿರಸಿ ತಾಲ್ಲೂಕಿನ ಬದನಗೋಡಿನ ಅನಾನಸ್ ಗದ್ದೆಯಲ್ಲಿ ಕಾಣಿಸಿಕೊಂಡಿದ್ದ ಆನೆಗಳ ಹಿಂಡು   

ಶಿರಸಿ: ತಾಲ್ಲೂಕಿನ ಬದನಗೋಡ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗುರುವಾರ ಕಾಡಾನೆಗಳ ಹಿಂಡು ಕಾಣಿಸಿಕೊಂಡು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ನಾಲ್ಕು ದಿನಗಳ ಹಿಂದೆ ಆನವಟ್ಟಿಯಲ್ಲಿ ಕಾಣಿಸಿಕೊಂಡಿದ್ದ ಮೂರು ಆನೆಗಳು ಹಾಗು ಒಂದು ಮರಿ, ಗುರುವಾರ ಕಾನೇಶ್ವರಿ ದೇವಾಲಯದ ಸಮೀಪ ಕಂಡುಬಂದವು. ರೈತರ ಜಮೀನಿನಲ್ಲಿ ಓಡಾಡಿದ ಇವು, ನಂತರ ಪಕ್ಕದ ಕಾಡಿಗೆ ಹೋಗಿವೆ. ಬದನಗೋಡಿನಿಂದ ಕ್ಯಾದಗಿಕೊಪ್ಪಕ್ಕೆ ಹೋಗುವ ಮಾರ್ಗ ಮಧ್ಯೆ ರೈತರ ಕೃಷಿ ಜಮೀನನ್ನು ತುಳಿದು ಹಾಳು ಮಾಡಿವೆ.

ಆನೆಗಳ ಫೋಟೊ ತೆಗೆಯಲು ಹೋಗಿದ್ದ ಕೆಲವರು, ಸ್ವಲ್ಪದರಲ್ಲೇ ಅಪಾಯದಿಂದ ಪಾರಾದರು. ಅರಣ್ಯ ಇಲಾಖೆ ಸಿಬ್ಬಂದಿ, ಆನೆಗಳನ್ನು ಓಡಿಸಲು ಸಹಕರಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.