ADVERTISEMENT

ಗೋವಾ ಕೈಗಾರಿಕಾ ವಸಾಹತು ಸಾಕಾರವಾದರೆ ಕಾರವಾರಕ್ಕೆ ಅನುಕೂಲ: ಡಾ.ಗಣೇಶ ಪಿ.ರಾಣೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 14:57 IST
Last Updated 13 ಏಪ್ರಿಲ್ 2019, 14:57 IST
ಕಾರವಾರದ ಕೆಎಚ್‍ಬಿ ಹೊಸ ಬಡಾವಣೆಯಲ್ಲಿರುವ ‘ನಿರ್ಮಾಣ ಭವನ’ದಲ್ಲಿ ಶುಕ್ರವಾರ ನಡೆದ ಸಿವಿಲ್ ಸಲಹಾ ಎಂಜಿನಿಯರರ ಸಂಘದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಡಾ.ಗಣೇಶ ಪಿ.ರಾಣೆ ಉದ್ಘಾಟಿಸಿದರು
ಕಾರವಾರದ ಕೆಎಚ್‍ಬಿ ಹೊಸ ಬಡಾವಣೆಯಲ್ಲಿರುವ ‘ನಿರ್ಮಾಣ ಭವನ’ದಲ್ಲಿ ಶುಕ್ರವಾರ ನಡೆದ ಸಿವಿಲ್ ಸಲಹಾ ಎಂಜಿನಿಯರರ ಸಂಘದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಡಾ.ಗಣೇಶ ಪಿ.ರಾಣೆ ಉದ್ಘಾಟಿಸಿದರು   

ಕಾರವಾರ:ಕರ್ನಾಟಕ– ಗೋವಾ ಗಡಿ ಸಮೀಪದ ದಕ್ಷಿಣ ಗೋವಾ ಜಿಲ್ಲೆಯಲ್ಲಿ ಐಐಟಿ ಹಾಗೂ ಕೈಗಾರಿಕಾ ವಸಾಹತು ನಿರ್ಮಿಸಲುಅಲ್ಲಿನ ಮಾಜಿ ಮುಖ್ಯಮಂತ್ರಿ ಮನೋಹರ ಪರ್ರೀಕರ್ ಯೋಜನೆ ರೂಪಿಸಿದ್ದರು. ಆದರೆ, ಕಾರಣಾಂತರಗಳಿಂದ ನನೆಗುದಿಗೆ ಬಿದ್ದಿವೆ. ಒಂದು ವೇಳೆಇವು ಸಾಕಾರವಾದರೆಕಾರವಾರ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಮುಂಬೈನ ಎಸ್ಆರ್‌ಆರ್‌ಆರ್ಇಂಡಸ್ಟ್ರೀಸ್‍ನಮುಖ್ಯ ಕಾರ್ಯ ನಿರ್ವಹಣಾಧಿಕಾರಿಡಾ.ಗಣೇಶ ಪಿ.ರಾಣೆ ಅಭಿಪ್ರಾಯಪಟ್ಟರು.

ನಗರದ ಕೆಎಚ್‍ಬಿ ಹೊಸ ಬಡಾವಣೆಯಲ್ಲಿರುವ ‘ನಿರ್ಮಾಣ ಭವನ’ದಲ್ಲಿ ಶುಕ್ರವಾರ ನಡೆದ ಸಿವಿಲ್ ಸಲಹಾ ಎಂಜಿನಿಯರರ ಸಂಘದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಘದ ಸದಸ್ಯರು ಸದಾ ಚಟುವಟಿಕೆಯಿಂದ ಗುರಿ ಸಾಧನೆಗೆ ಶ್ರಮಿಸಬೇಕು. ಸಂಘದ ಹಳೆಯ ಪದಾಧಿಕಾರಿಗಳು ಮತ್ತು ಹೊಸ ಪದಾಧಿಕಾರಿಗಳು ಎಂಬ ತಾರತಮ್ಯ ಬದಿಗಿಡಬೇಕು. ಸಮಾಜಸೇವೆಯಲ್ಲಿ ತೊಡಗಬೇಕು ಎಂದುಸಲಹೆನೀಡಿದರು.

ADVERTISEMENT

ಮಾಜಾಳಿಯ ಜಿಎಸ್‌ಐಟಿಯ ಪ್ರಾಚಾರ್ಯ ಸುರೇಶ ಡಿ.ಮಾನೆ ಮಾತನಾಡಿ, ‘ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳು ಬಂದಿವೆ. ಇಂಟರ್‌ನೆಟ್ಮತ್ತು ಮೊಬೈಲ್ ಆ್ಯಪ್‌ಗಳಲ್ಲಿ ಕಟ್ಟಡ್ ಮಾದರಿಗಳು, ಬಳಸುವ ಸಾಮಗ್ರಿಯ ಸಂಪೂರ್ಣ ಮಾಹಿತಿಯಿರುತ್ತವೆ. ಅವುಗಳನ್ನು ಬಳಸಿಕೊಂಡು ಗುಣಮಟ್ಟದ ಕಟ್ಟಡ ನಿರ್ಮಿಸಬೇಕು’ ಎಂದರು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ದಿನೇಶ ವಿ.ನಾಯ್ಕ ಮಾತನಾಡಿದರು. ನಿಕಟಪೂರ್ವಅಧ್ಯಕ್ಷ ಮೆಹಬೂಬ್ ಸೈಯ್ಯದ್ 2018-19ನೇ ಸಾಲಿನ ಕಾರ್ಯ ಚಟುವಟಿಕೆಯ ಮಾಹಿತಿ ನೀಡಿದರು. ಖಜಾಂಚಿ ರಾಘವೇಂದ್ರ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಗಣೇಶ ಆಚಾರ್ಯ ವಂದಿಸಿದರು. ಕಾರ್ಯಕಾರಿ ಮಂಡಳಿ ಸದಸ್ಯ ನಾಗರಾಜ ಜೋಶಿ ಅತಿಥಿಗಳನ್ನು ಪರಿಚಯಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರದೀಪ ಗೋವೇಕರ, ಗಜಾನನ ಗುರವ, ಯು.ಎನ್.ನಾಯ್ಕ, ಪ್ರೀತಂ ಮಾಸೂರಕರ, ದೇವರಾಯ ವೆರ್ಣೇಕರ, ವಿವೇಕ ಬೋಮ್ಕರ್, ಮಿನಿನ್ ಪೊಡ್ತಾಡೋ, ವಿನೋದ ಸಾಕೇಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.