
ಪ್ರಜಾವಾಣಿ ವಾರ್ತೆ
ದಾಂಡೇಲಿ: ನಗರದ ರೋಟರಿ ಕ್ಲಬ್ ವತಿಯಿಂದ ಪರಿಸರ ಸಂರಕ್ಷಣೆ ಮತ್ತು ಪರಿಸರ ಕಾಳಜಿ ಜಾಗೃತಿಗಾಗಿ ವಿವಿಧ ಜಾತಿಯ ಮರಗಳ ಬೀಜದ ಉಂಡೆಗಳ ವಿತರಣಾ ಕಾರ್ಯಕ್ರಮ ಶನಿವಾರ ರೋಟರಿ ಶಾಲೆಯ ಆವರಣದಲ್ಲಿ ನಡೆಯಿತು.
ಶಾಲಾ ಮಕ್ಕಳಿಂದ 300 ಬೀಜದ ಉಂಡೆಗಳನ್ನು ತಯಾರಿಸಿ, ಅವುಗಳನ್ನು ಹೇಗೆ ಪ್ರಸರಣ ಮಾಡಬೇಕು ಎಂದು ತಿಳಿಸಿ ಕೊಡಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ರಾಹುಲ್ ಬಾವಾಜಿ, ಕಾರ್ಯದರ್ಶಿ ಅಶುತೋಷ್ ಕುಮಾರ್ ರೈ, ಖಜಾಂಚಿ ಲಿಯೋ ರಫೆಲ್ ಪಿಂಟೊ, ಪ್ರಕಾಶ ಕನ್ಮೆಹಳ್ಳಿ ಮತ್ತು ಸಯ್ಯದ್ ಆಸಿಫ್ ದಫೇದಾರ್, ರೋಟರಿ ಮುಖ್ಯಸ್ಥೆ ಕಲ್ಪನಾ ನಾಯಕ, ಮುಖ್ಯಶಿಕ್ಷಕಿ ಪತ್ತಾರ ಸುನೀತಾ, ರವಿ ಶಾನಭಾಗ, ಪ್ರಕಾಶ ಮತ್ತು ಶಿಕ್ಷಕರು, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.