ದಾಂಡೇಲಿ: ‘ಬರೆದಿದ್ದೆಲ್ಲಾ ಸಾಹಿತ್ಯ ಆಗುವುದಿಲ್ಲ. ಕವಿತೆಯೂ ಆಗುವುದಿಲ್ಲ. ಸಮಾಜದಲ್ಲಿ ನಡೆಯುವ ಘಟನೆಗಳಿಗೆ ಮನಸ್ಸು ಮಿಡಿದು, ಅನುಭವ ಹಾಗೂ ಭಾವನೆಗಳನ್ನು ಅಕ್ಷರದಲ್ಲಿ ಬಂಧಿಸಿದಾಗ ಮಾತ್ರ ಕವಿತೆಯ ಹುಟ್ಟು ಸಾಧ್ಯ’ ಎಂದು ರಂಗ ಕಲಾವಿದ, ಸಾಹಿತಿ ಅಜನಾಳ ಭೀಮಾಶಂಕರ ಹೇಳಿದರು.
ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ದಾಂಡೇಲಿ ತಾಲ್ಲೂಕು ಘಟಕದ ವತಿಯಿಂದ ಟೌನ್ ಶಿಪ್‌ನ ವಿಜಯ ಕೊಳೆಕರ ನಿವಾಸದಲ್ಲಿ ನಡೆದ ಮನೆಯಂಗಳದಲ್ಲಿ ಮುಂಗಾರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಕವಿತೆಗಳು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕೆಲಸ ಮಾಡಬೇಕು. ಕವಿತೆ ರಚನೆಗೆ ಆಳ ಓದಿನ ಅನುಭವ, ವಸ್ತುಸ್ಥಿತಿ ವಿಶ್ಲೇಷಣೆ ಅನುಸಂಧಾನ ಅಗತ್ಯ. ಯುವ ಕವಿಗಳು ಅವಸರಕ್ಕೆ ಕವಿತೆ ಬರೆಯದೇ ಅನುಭವಿಸಿ ಬರೆಯುವುದನ್ನು ಕಲಿಯಬೇಕು. ಇಂದಿನ ದಿನಮಾನದಲ್ಲಿ ವೇದಿಕೆ ಸಿಗುವುದು ಕಷ್ಟ ಹಾಗಾಗಿ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಬೇಕು’ ಎಂದರು.
ಪತ್ರಕರ್ತ ಪ್ರವೀಣಕುಮಾರ ಸುಲಾಖೆ ಮಾತನಾಡಿದರು. ಬಸವರಾಜ ನರಸಪ್ಪನವರ, ಮುರ್ತುಜಾ ಹುಸೇನ್ ಆನೆಹೊಸುರ, ಅಶ್ವಿನಿ ಶೆಟ್ಟಿ, ಪದ್ಮಶ್ರೀ ಜೈನ, ಕೃಷ್ಣ ಕುಲಕರ್ಣಿ, ನಾಗೇಶ ನಾಯ್ಕ, ಐಶ್ವರ್ಯ ನಂದಿಹಳ್ಳಿ, ಗಿರೀಶ ಶಿರೋಡ್ಕರ, ಪ್ರಮೋದ ನಾಯ್ಕ ಹಾಗೂ ಅನಿತಾ ನಾಯ್ಕ ಸ್ವರಚಿತ ಕವನಗಳನ್ನು ವಾಚಿಸಿದರು.
ನಗರಸಭಾ ಸದಸ್ಯ ವಿಜಯ ಕೊಳೆಕರ, ತಾಲ್ಲೂಕು ಘಟಕದ ಅಧ್ಯಕ್ಷೆ ದೀಪಾಲಿ ಸಾಮಂತ, ದೃಷ್ಟಿ ಕಾಮತ, ನಾಗೇಶ ನಾಯ್ಕ, ವೀಣಾ ಕ್ಷೀರಸಾಗರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.