ADVERTISEMENT

ಏ.12ರಿಂದ ಮಡಗಾಂವ್– ಮಂಗಳೂರು ರೈಲು ಸಂಚಾರ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 14:18 IST
Last Updated 8 ಏಪ್ರಿಲ್ 2021, 14:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾರವಾರ: ಮಡಗಾಂವ್ ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ನಡುವೆ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವು ಏ.12ರಂದು ಪುನಃ ಆರಂಭವಾಗಲಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ.

07107 ಸಂಖ್ಯೆಯ ರೈಲು ಮಡಗಾಂವ್‌ನಿಂದ ಬೆಳಿಗ್ಗೆ 5.10ಕ್ಕೆ (ಭಾನುವಾರ ಹೊರತುಪಡಿಸಿ) ಪ್ರಯಾಣ ಆರಂಭಿಸಲಿದೆ. ಮಧ್ಯಾಹ್ನ 12.15ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಈ ರೈಲಿನ ಸಂಚಾರವು ಸದ್ಯಕ್ಕೆ ಜೂನ್ 9ರವರೆಗೆ ನಿಗದಿಯಾಗಿದೆ. 07108 ಸಂಖ್ಯೆ ರೈಲು ಮಂಗಳೂರು ಸೆಂಟ್ರಲ್‌ನಿಂದ ಮಧ್ಯಾಹ್ನ 2.45ಕ್ಕೆ ಹೊರಟು ರಾತ್ರಿ 10.10ಕ್ಕೆ ಮಡಗಾಂವ್ ತಲುಪಲಿದೆ.

ಈ ರೈಲಿಗೆ ಅಸ್ನೋಟಿ, ಕಾರವಾರ, ಅಂಕೋಲಾ, ಗೋಕರ್ಣ ರೋಡ್, ಕುಮಟಾ, ಹೊನ್ನಾವರ, ಮಂಕಿ, ಮುರ್ಡೇಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಸೇನಾಪುರ, ಕುಂದಾಪುರ, ಬಾರ್ಕೂರು, ಉಡುಪಿ, ಮುಲ್ಕಿ, ಸುರತ್ಕಲ್ ಮತ್ತು ಮಂಗಳೂರು ಜಂಕ್ಷನ್‌ನಲ್ಲಿ ನಿಲುಗಡೆಯಿದೆ. ಮುಂಗಡ ಪ್ರಯಾಣ ಕಾಯ್ದಿರಿಸಿ ಪ್ರಯಾಣಿಸಲು ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಯಶವಂತಪುರ– ಕಾರವಾರ:

ಯುಗಾದಿ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಂಗಳೂರಿನ ಯಶವಂತಪುರ– ಕಾರವಾರ– ಯಶವಂತಪುರ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು (ಮುಂಗಡ ಟಿಕೆಟ್ ಕಾಯ್ದಿರಿಸಿ ಪ್ರಯಾಣ) ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

06513 ಸಂಖ್ಯೆ ರೈಲು ಯಶವಂತಪುರದಿಂದ ಏ.9ರಂದು ರಾತ್ರಿ 11.45ಕ್ಕೆ ಹೊರಟು ಏ.10ರಂದು ಮಧ್ಯಾಹ್ನ 3.40ಕ್ಕೆ ಕಾರವಾರ ತಲುಪಲಿದೆ. 06514 ಸಂಖ್ಯೆಯ ರೈಲು ಕಾರವಾರದಿಂದ ಏ.10ಕ್ಕೆ ಸಂಜೆ 4.10ಕ್ಕೆ ಪ್ರಯಾಣಿಸಿ ಮರು ದಿನ ಬೆಳಿಗ್ಗೆ 11.15ಕ್ಕೆ ಯಶವಂತಪುರ ತಲುಪಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.