ADVERTISEMENT

ಮೀನು ಮಾರುಕಟ್ಟೆ ಜನವರಿಯಲ್ಲಿ ಉದ್ಘಾಟನೆ?

ಮೊದಲ ಹಂತದಲ್ಲಿ ನೆಲ ಅಂತಸ್ತು, ಮೊದಲ ಮಹಡಿಯಲ್ಲಿ ವ್ಯಾಪಾರ, ವಹಿವಾಟಿಗೆ ಅವಕಾಶ

ಸದಾಶಿವ ಎಂ.ಎಸ್‌.
Published 28 ಅಕ್ಟೋಬರ್ 2019, 19:31 IST
Last Updated 28 ಅಕ್ಟೋಬರ್ 2019, 19:31 IST
ಕಾರವಾರದ ಮೀನು ಮಾರುಕಟ್ಟೆ ಕಟ್ಟಡದ ಕಾಮಗಾರಿ ಅರ್ಧಕ್ಕೇ ನಿಂತಿರುವುದು.
ಕಾರವಾರದ ಮೀನು ಮಾರುಕಟ್ಟೆ ಕಟ್ಟಡದ ಕಾಮಗಾರಿ ಅರ್ಧಕ್ಕೇ ನಿಂತಿರುವುದು.   

ಕಾರವಾರ:ನಗರದಲ್ಲಿ ನಿರ್ಮಾಣವಾಗುತ್ತಿರುವ ನೂತನ ಮೀನು ಮಾರುಕಟ್ಟೆಯು ಗಣರಾಜ್ಯೋತ್ಸವದಂದು (ಜ.26) ಉದ್ಘಾಟನೆಯಾಗುವ ಸಾಧ್ಯತೆಯಿದೆ. ಕಾಮಗಾರಿ ವಿಳಂಬವಾಗಲು ಕಾರಣವಾಗಿದ್ದ ಕೆಲವು ಅಂಶಗಳಿಗೆ ಪರ್ಯಾಯ ಮಾರ್ಗ ಹುಡುಕಲಾಗಿದೆ. ಹಾಗಾಗಿಮೊದಲ ಹಂತದ ಕೆಲಸಗಳು ಮುಕ್ತಾಯವಾಗಲಿವೆ ಎಂಬುದು ನಗರಸಭೆಯ ವಿಶ್ವಾಸವಾಗಿದೆ.

‘ಮೀನು ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಿ ಕಟ್ಟಲುಪಕ್ಕದ ಮಾರುಕಟ್ಟೆಯ ಕಟ್ಟಡಗಳು ಅಡ್ಡಿಯಾಗುತ್ತವೆ. ಈ ವಿಚಾರ ಈಗಾಗಲೇ ನ್ಯಾಯಾಲಯದಲ್ಲಿದೆ.ಹಾಗಾಗಿ ಅದರಬದಲು ಮೀನು ಮಾರುಕಟ್ಟೆಯ ಕಟ್ಟಡದಲ್ಲೇಹೆಚ್ಚಿನ ಅಂತಸ್ತುಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಸಹಮತ ವ್ಯಕ್ತಪಡಿಸಿದೆ’ ಎಂದು ನಗರಸಭೆ ಆಯುಕ್ತ ಯೋಗೇಶ್ವರ್ ಮಾಹಿತಿ ನೀಡಿದರು.

‘ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಸಮಗ್ರ ಅಭಿವೃದ್ಧಿ ನಿಧಿ (IDSMT)₹ 5 ಕೋಟಿ ಇದೆ. ಈ ನಿಧಿಯ ಬಳಕೆಗೆ ಇರುವ ಸಮಿತಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದಾರೆ. ನಗರಸಭೆ ಆಯುಕ್ತರು ಸೇರಿದಂತೆಏಳುಮಂದಿ ಸದಸ್ಯರಿದ್ದಾರೆ. ಯೋಜನಾ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಈ ಹಣದೊಂದಿಗೆ ನಗರೋತ್ಥಾನದ ₹ 5 ಕೋಟಿ ಹಣವನ್ನೂ ಸೇರಿಸಿ ಒಟ್ಟು ₹ 10 ಕೋಟಿಯಲ್ಲಿ ಕಾಮಗಾರಿ ಮಾಡಲಾಗುತ್ತದೆ. ನಗರೋತ್ಥಾನದಿಂದ ಮೀನು ಮಾರುಕಟ್ಟೆ, IDSMTಯಿಂದ ವಾಣಿಜ್ಯ ಮಳಿಗೆಗಳ ನಿರ್ಮಾಣವಾಗಲಿದೆ’ ಎಂದು ವಿವರಿಸಿದರು.

ADVERTISEMENT

‘ಜಿಲ್ಲಾ ನಗರಾಭಿವೃದ್ಧಿ ಕೋಶದಿಂದನಗರೋತ್ಥಾನದ ಟೆಂಡರ್ ಕರೆದರೆ, IDSMTಯಿಂದ ವಾಣಿಜ್ಯ ಮಳಿಗೆಗಳ ಕಾಮಗಾರಿಯ ಟೆಂಡರ್ ಕರೆಯಲಾಗುತ್ತದೆ.ಎರಡೂ ನಿಧಿಗಳನ್ನು ಜೊತೆಗೂಡಿಸಿ ಮಳಿಗೆ ಮತ್ತುಮೀನುಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಈಗ ನಿರ್ಮಾಣ ಮಾಡಿರುವಷ್ಟೇ ಕಾಮಗಾರಿಯನ್ನು ಇನ್ನೂ ಮಾಡಬೇಕಿದೆ. ಆಗ ನೆಲಮಹಡಿಯಲ್ಲಿ 108 ಮೀನುಗಾರ ಮಹಿಳೆಯರಿಗೆ ಮಳಿಗೆಗಳು ಮತ್ತು ಎಂಟುಅಂಗಡಿಗಳು ನಗರೋತ್ಥಾನದಲ್ಲಿ ನಗರಸಭೆಗೆ ಸಿಗಲಿವೆ. ಮೊದಲ ಮಹಡಿಯಲ್ಲಿ 34 ಅಂಗಡಿಗಳು, ಎರಡನೇ ಮಹಡಿಯಲ್ಲಿ 108 ಮಳಿಗೆಗಳು ನಿರ್ಮಾಣವಾಗಲಿವೆ. ಅದನ್ನೂ ಅಗತ್ಯವಿದ್ದರೆ ಮೀನು ವ್ಯಾಪಾರಕ್ಕೆ ಕೊಡಲು ತೀರ್ಮಾನಿಸಬಹುದು. ಈ ಬಗ್ಗೆ ಮೀನುಗಾರ ಸಮುದಾಯದ ಮುಖಂಡರ ಜೊತೆ ಚರ್ಚಿಸಲಾಗಿದೆ. ಅವರೂ ಕಟ್ಟಡವನ್ನು ಸಂಪೂರ್ಣನಿರ್ಮಿಸಿಕೊಡಿಎಂದು ಮನವಿ ಮಾಡಿದ್ದಾರೆ’ ಎಂದು ತಿಳಿಸಿದರು.

‘ಸಂಪೂರ್ಣ ಕಟ್ಟಡ ನಿರ್ಮಾಣ’:‘ಮೀನು ಮಾರುಕಟ್ಟೆಯ ಮೂಲ ನಕ್ಷೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಸಂಪೂರ್ಣ ಕಟ್ಟಡವನ್ನು ನಿರ್ಮಿಸಲಾಗುವುದು. ಇದರಲ್ಲಿ ಯಾವುದೇ ಸಂಶಯ ಬೇಡ’ ಎಂದು ಯೋಗೇಶ್ವರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಮೊದಲ ಹಂತದಲ್ಲಿ ಸಮೀಪದ ಮಾರುಕಟ್ಟೆಯ 10 ಅಂಗಡಿಗಳನ್ನು ಒಡೆಯದೇ ನೆಲಮಹಡಿ ಮತ್ತು ಮೊದಲ ಅಂತಸ್ತಿನ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಉಳಿದ ಕಾಮಗಾರಿಯನ್ನು ನ್ಯಾಯಾಲಯದ ತೀರ್ಪಿನ ಬಳಿಕಸಂಪೂರ್ಣಗೊಳಿಸಿ ಕೊಡಲಾಗುತ್ತದೆ. ಈ ಬಗ್ಗೆ ಮೀನು ವ್ಯಾಪಾರಸ್ಥ ಮಹಿಳೆಯರಿಗೂ ತಿಳಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.