ADVERTISEMENT

ಜೂಜಾಟ: 8 ಜನರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 15:37 IST
Last Updated 20 ಮಾರ್ಚ್ 2025, 15:37 IST

ಯಲ್ಲಾಪುರ: ಇಲ್ಲಿನ ಶಿರಸಿ ರಸ್ತೆಯ ಬೇಡ್ತಿ ಸೇತುವೆ ಸಮೀಪದ ಅರಣ್ಯದಲ್ಲಿ ಜೂಜಾಟದಲ್ಲಿ ತೊಡಗಿದ್ದ ಆರೋಪದಡಿ ಎಂಟು ಜನರ ವಿರುದ್ಧ ಪೊಲೀಸರು ಗುರುವಾರ ಪ್ರಕರಣ ದಾಖಲಿಸಿದ್ದಾರೆ.

ತಟಗಾರ್ ಕ್ರಾಸಿನ ಮೀನು ವ್ಯಾಪಾರಿ ಮಂಜುನಾಥ ಅರ್ಜುನ ರಾವ್, ಮಂಜುನಾಥ ನಗರದ ಮಂಜುನಾಥ ಗೋಪಾಲ ನಾಯ್ಕ, ಸಬಗೇರಿಯ ಚಾಲಕ ಮಹಮ್ಮದ್ ರಫೀಕ್ ಖಾನ್, ನೂತನ ನಗರ-ಜಡ್ಡಿಯ ಪ್ರಶಾಂತ ಮಾರುತಿ ರಾವೋಜಿ, ತೇಲಂಗಾರದ ಚಾಲಕ ವಿದ್ಯಾಧರ ಲಕ್ಷ್ಮಣ ಬಾಂದೇಕರ, ವಜ್ರಳ್ಳಿಯ ಚಾಲಕ ಜಿಕ್ರಿಯಾ ಉಮ್ಮರ ಮುಲ್ಲಾ, ಕಾಳಮ್ಮನಗರದ ಯಾಸೀನ ಶೇಖ್, ತಟಗಾರ ಕ್ರಾಸಿನ ಸುನಿಲ್ ಯಲ್ಲಾಪುರಕರ ಆರೋಪಿಗಳು.

ಆರೋಪಿತಗಳಿಂದ ನಗದು, ಮೊಬೈಲ್ ಫೋನ್, ಬೈಕ್‌ ಸೇರಿದಂತೆ ಒಟ್ಟು ₹1.94 ಲಕ್ಷ  ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.