
ಪ್ರಜಾವಾಣಿ ವಾರ್ತೆ
ಎಫ್‌ಐಆರ್
ಭಟ್ಕಳ: ತಾಲ್ಲೂಕಿನ ಬೈಲೂರು ರಸ್ತೆಯ ಗೂಡಂಗಡಿ ಪಕ್ಕದ ಬಯಲು ಪ್ರದೇಶದಲ್ಲಿ ಶುಕ್ರವಾರ ಜೂಜು ಆಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಮುರುಡೇಶ್ವರ ಠಾಣಾ ಪೊಲೀಸರು ನಾಲ್ವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ತಾಲ್ಲೂಕಿನ ಮಾವಿನಕಟ್ಟೆ ಹೆದ್ದಾರಿ ಮನೆ ನಿವಾಸಿ ದಿನೇಶ ಈರಯ್ಯ ದೇವಾಡಿಗ, ಬೈಲೂರು ಸಣ್ಣಬಲ್ಸೆ ನಿವಾಸಿ ಈಶ್ವರ ಮಂಜುನಾಥ ದೇವಾಡಿಗ, ಬೈಲೂರು ನಿವಾಸಿ ಸುಬ್ರಾಯ ನಾಗಪ್ಪ ನಾಯ್ಕ ಹಾಗೂ ಬೈಲೂರು ತುಂಬೆಬೀಳು ನಿವಾಸಿ ಪ್ರವೀಣ ರವಿ ನಾಯ್ಕ ಆರೋಪಿತರು.
ದಾಳಿ ಸಮಯದಲ್ಲಿ ಸ್ಥಳದಲ್ಲಿ ಸಿಕ್ಕ ₹6 ಸಾವಿರ ನಗದು ಹಾಗೂ 24 ಸಾವಿರ ಮೌಲ್ಯದ ಎರಡು ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.