
ಪ್ರಜಾವಾಣಿ ವಾರ್ತೆ
ಬಂಧನ
ಗೋಕರ್ಣ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ ಆರೋಪದ ಮೇಲೆ ಮೂರು ಪ್ರತ್ಯೇಕ ಪ್ರಕರಣದಲ್ಲಿ ಮೂವರು ಪುರುಷರು ಹಾಗೂ ಒರ್ವ ಮಹಿಳಾ ಆರೋಪಿಗಳನ್ನು ಗುರುವಾರ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.
ಪಲ್ಲಬ ದತ್ತ ಗುಪ್ತಾ (32), ಚೇತನ ಗಣೇಶ ಭಟ್ಟ (31), ಶ್ಯಾಮ ಗೋಪಾಲಕೃಷ್ಣ ಸುಂದರ (28) ಹಾಗೂ ಅಂಕಿತಾ ದೀಪಕಕುಮಾರ ಭಟ್ಟಾಚಾರ್ಯ(42) ಬಂಧಿತರು.
ಪೊಲೀಸ್ ಉಪನಿರೀಕ್ಷಕ ಖಾಧರ್ ಭಾಷಾ ನೇತೃತ್ವದ ತಂಡವು ಆರೋಪಿಗಳನ್ನು ವೈದ್ಯಕೀಯ ತಪಾಸಣೆೆಗೆ ಒಳಪಡಿಸಿ, ಮುಂದಿನ ಕ್ರಮ ಜರುಗಿಸಿದ್ದಾರೆ. ಈ ಕುರಿತು ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.