ಬಂಧನ
ದಾಂಡೇಲಿ: ಇಲ್ಲಿನ ಹಳಿಯಾಳ ರಸ್ತೆಯ ಟ್ರಕ್ ಪಾರ್ಕಿಂಗ್ ಸ್ಥಳದಲ್ಲಿ ಸೋಮವಾರ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಧಾರವಾಡ ಜಿಲ್ಲೆಯ ಅಳ್ನಾವರ ತಾಲ್ಲೂಕಿನ ಇಂದಿರಾನಗರ ಗ್ರಾಮದ ಸಂಜಯ ಮನೋಹರ ಕದಂ ಮತ್ತು ಮೆಹಬೂಬ ನೂರಅಹಮ್ಮದ ಅಂಬೋಳೆ ಬಂಧಿತ ಆರೋಪಿಗಳು. ಇವರಿಂದ ₹30,000 ಮೌಲ್ಯದ 509 ಗ್ರಾಂ ಗಾಂಜಾ ಮತ್ತು ₹300 ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಂಡೇಲಿ ನಗರ ಠಾಣೆಯ ಪಿಎಸ್‌ಐಗಳಾದ ಅಮೀನಸಾಬ್ ಅತ್ತಾರ್, ಕಿರಣ ಪಾಟೀಲ ಮತ್ತು ಸಿಬ್ಬಂದಿ ಪರಶುರಾಮ ನಾಗರಾಳ, ಈರಣ್ಣಾ ವಡ್ಡಡಗಿ, ರಮೇಶ ನಿಂಬರಗಿ, ಇಮ್ರಾನ ಕಂಬಾರಗಣವಿ, ಗುಂಡು ಖಂಡೇಕರ, ಶಂಕರಲಿಂಗ್ ಕ್ಷತ್ರಿಯ, ವೆಂಕಟೇಶ ಮದ್ದೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಎಎಸ್‌ಐ ನಾಗರಾಜ ನಾಯ್ಕ ಅವರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.