ADVERTISEMENT

ಗೋಕರ್ಣ | ಗಾಂಜಾ ಪತ್ತೆ: ಆರೋಪಿ ಪೊಲೀಸರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2025, 4:40 IST
Last Updated 21 ಜುಲೈ 2025, 4:40 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಗೋಕರ್ಣ: ಇಲ್ಲಿಯ ಓಂ ಬೀಚಿಗೆ ಹೋಗುವ ರಸ್ತೆಯ ಬೇಲೆಕಾನ್ ಕ್ರಾಸ್ ಬಳಿ, ಗಾಂಜಾ ಇಟ್ಟುಕೊಂಡಿದ್ದ ಆರೋಪಿಯನ್ನು ಭಾನುವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ADVERTISEMENT

ಕುಮಟಾದ ಕೊಪ್ಪಳಕರವಾಡಿ ನಿವಾಸಿ ದರ್ಶನ ಸುಬ್ರಾಯ ಮಾಜಾಳಿ (23) ಆರೋಪಿ.  

₹5 ಸಾವಿರ ಮೌಲ್ಯದ 54 ಗ್ರಾಂ ಗಾಂಜಾ ಮಾರಾಟಕ್ಕಾಗಿ ಇಟ್ಟುಕೊಂಡಿದ್ದ ಆರೋಪಿ ಪೊಲೀಸ್ ಉಪನಿರೀಕ್ಷಕ ಖಾದರ ಭಾಷ ನೇತೃತ್ವದ ಪೊಲೀಸ್ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ. 

ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.