ADVERTISEMENT

ಗೋವಾ ಮದ್ಯ ವಶ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 13:09 IST
Last Updated 6 ನವೆಂಬರ್ 2019, 13:09 IST
ಗೋಕರ್ಣದ ಬಸ್ ನಿಲ್ದಾಣದ ಸಮೀಪ ಪೊಲೀಸರು ವಶ ಪಡಿಸಿಕೊಂಡ ಗೋವಾ ಮದ್ಯದ ಬಾಟಲಿಗಳು
ಗೋಕರ್ಣದ ಬಸ್ ನಿಲ್ದಾಣದ ಸಮೀಪ ಪೊಲೀಸರು ವಶ ಪಡಿಸಿಕೊಂಡ ಗೋವಾ ಮದ್ಯದ ಬಾಟಲಿಗಳು   

ಗೋಕರ್ಣ: ಇಲ್ಲಿನ ಬಸ್ ನಿಲ್ದಾಣದ ಹಿಂಬದಿಯ ತಾರಮಕ್ಕಿಗೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಗೋವಾ ಮದ್ಯವನ್ನು ಪೊಲೀಸರು ಮಂಗಳವಾರ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಗಂಗೆಕೊಳ್ಳದ ಲಕ್ಷ್ಮಿಶೇಷು ತಾಂಡೇಲ್ (57) ಹಾಗೂ ಬೇಬಿ ಚಂದ್ರಕಾಂತ ತಾಂಡೇಲ್ (55) ಬಂಧಿತರು. ಅವರಿಂದ ಸುಮಾರು ₹ 4,300ಮೌಲ್ಯದ ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ತಲಾ 750 ಎಂ.ಎಲ್ ಅಳತೆಯ 70 ಮದ್ಯದ ಬಾಟಲಿಗಳು ಅವರ ಬಳಿ ಸಿಕ್ಕಿವೆ. ಅವುಗಳನ್ನುಗೋವಾದಿಂದ ಅಕ್ರಮವಾಗಿ ಸಾಗಾಟ ಮಾಡಿಕೊಂಡು ಬಂದು ತಮ್ಮ ಬಳಿ ಇಟ್ಟುಕೊಂಡಿದ್ದರು ಎನ್ನಲಾಗಿದೆ.

ಪಿ.ಎಸ್.ಐ. ಸುಧಾ ಅಘನಾಶಿನಿ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿದ ಪೊಲೀಸರು,ಆರೋಪಿಗಳನ್ನು ನ್ಯಾಯಾಲಯಕ್ಕೆಹಾಜರುಪ‍ಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.