ADVERTISEMENT

ಗೋಕರ್ಣ: ಸಮುದ್ರದಲ್ಲಿ ಮುಳುಗುತ್ತಿದ್ದ ವಿದೇಶಿ ಮಹಿಳೆ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 4:48 IST
Last Updated 19 ನವೆಂಬರ್ 2025, 4:48 IST
<div class="paragraphs"><p>ಮೈಸ್ಟಿಕ್ ಗೋಕರ್ಣ ಅಡ್ವೆಂಚರ್ಸ್ ಸಿಬ್ಬಂದಿ ಜೊತೆ ಕಜಕಿಸ್ತಾನದ ಐದಾಲಿ</p></div>

ಮೈಸ್ಟಿಕ್ ಗೋಕರ್ಣ ಅಡ್ವೆಂಚರ್ಸ್ ಸಿಬ್ಬಂದಿ ಜೊತೆ ಕಜಕಿಸ್ತಾನದ ಐದಾಲಿ

   

ಗೋಕರ್ಣ: ಇಲ್ಲಿಯ ಕುಡ್ಲೆಯ ಸಮುದ್ರ ನೀರಿನಲ್ಲಿ ಸೋಮವಾರ ಬೆಳಿಗ್ಗೆ ಈಜಾಡಲು ತೆರಳಿ, ಅಲೆಯ ರಭಸಕ್ಕೆ ಮುಳುಗುತ್ತಿದ್ದ ಕಜಕಿಸ್ತಾನ ದೇಶದ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದೆ.

ಕಜಿಕಿಸ್ತಾನದ ಐದಾಲಿ (25) ರಕ್ಷಿಸಲಾದ ಮಹಿಳೆ. ವಿದೇಶಿ ದಂಪತಿ ಸಮುದ್ರದಲ್ಲಿ ಈಜಾಡಲು ತೆರಳಿ, ಅಲೆಯ ರಭಸಕ್ಕೆ ಸಿಲುಕಿ ಮುಳುಗುವ ಹಂತದಲ್ಲಿದ್ದರು. ಗಮನಿಸಿದ ಮೈಸ್ಟಿಕ್ ಗೋಕರ್ಣ ಅಡ್ವೆಂಚರ್ಸ್ ಸಿಬ್ಬಂದಿ ಹಾಗೂ ಜೀವ ರಕ್ಷಕ ಸಿಬ್ಬಂದಿ ವಾಟರ್ ಬೈಕ್ ಮೂಲಕ ಮಹಿಳೆಯನ್ನು ರಕ್ಷಿಸಿದ್ದಾರೆ.

ADVERTISEMENT

ಕಾರ್ಯಾಚರಣೆಯಲ್ಲಿ ಲಕ್ಷ್ಮೀಕಾಂತ ಹರಿಕಂತ್ರ, ಮುಂಜುನಾಥ ಹರಿಕಂತ್ರ, ಗಿರೀಶ ಗೌಡ ಮತ್ತು ನಾಗೇಂದ್ರ ಕುರ್ಲೆ ಶೇಖರ ಹರಿಕಂತ್ರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.