ADVERTISEMENT

ಮಹಾಬಲೇಶ್ವರನ ಕಾರ್ತೀಕ ದೀಪೋತ್ಸವ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 16:28 IST
Last Updated 30 ನವೆಂಬರ್ 2020, 16:28 IST
ದೀಪಗಳಿಂದ ಅಲಂಕೃತಗೊಂಡ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನ ಮತ್ತು ಶಿಖರ
ದೀಪಗಳಿಂದ ಅಲಂಕೃತಗೊಂಡ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನ ಮತ್ತು ಶಿಖರ   

ಗೋಕರ್ಣ: ಶಾರ್ವರಿ ಸಂವತ್ಸರದ ಕಾರ್ತೀಕ ಪೌರ್ಣಮಿಯ ದಿನವಾದ ಭಾನುವಾರದಂದು ತ್ರಿಪುರಾಖ್ಯ ದೀಪೋತ್ಸವದ ಪ್ರಯುಕ್ತ, ಪುರಾಣ ಪ್ರಸಿದ್ಧ ಮಹಾಬಲೇಶ್ವರನ ದೇವಸ್ಥಾನವನ್ನು ದೀಪ ಮತ್ತು ಹೂಗಳಿಂದ ಶೃಂಗರಿಸಲಾಗಿತ್ತು.

ಮಧ್ಯಾಹ್ನ ಭೀಮಕೊಂಡದಲ್ಲಿ ವನಭೋಜನ ಪೂರೈಸಿ, ರಾತ್ರಿ ಬೆಳ್ಳಿ ರಥದಲ್ಲಿ ದೇವಸ್ಥಾನ ಪ್ರವೇಶಿಸಿದ ಮಹಾಬಲೇಶ್ವರನ ಉತ್ಸವ ಮೂರ್ತಿಯನ್ನು ದೀಪೋತ್ಸ
ವದೊಂದಿಗೆ ಸ್ವಾಗತಿಸಲಾಯಿತು. ದಾರಿಯುದ್ದಕ್ಕೂ ತಳಿರು, ತೋರಣಗಳಿಂದ ಶೃಂಗರಿಸಲಾಗಿತ್ತು. ಭಕ್ತರು ಮಹಾಬಲೇಶ್ವರನ ಉತ್ಸವಕ್ಕೆ ಆರತಿ ಬೆಳಗಿ ಕೃತಾರ್ಥರಾದರು. ಮಹಾಬಲೇಶ್ವರನ ಶಿಖರದ ತುಂಬಾ ಎಣ್ಣೆ ದೀಪ ಹಚ್ಚಿ ದೀಪೋತ್ಸವ ನಡೆಸಲಾಯಿತು. ವೈದಿಕರ ಮಂತ್ರ ಪಠಣ ಎಲ್ಲದಕ್ಕೂ ಶೋಭೆ ತಂದಿತು.

ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ದೀಪೋತ್ಸವದಲ್ಲಿ ಭಾಗವಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.