ADVERTISEMENT

ಗೋಕರ್ಣ: ಸಮುದ್ರದಲ್ಲಿ ಮುಳುಗುತ್ತಿದ್ದ ನಾಲ್ವರು ವಿದ್ಯಾರ್ಥಿಗಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2021, 10:00 IST
Last Updated 14 ಅಕ್ಟೋಬರ್ 2021, 10:00 IST
   

ಗೋಕರ್ಣ: ಇಲ್ಲಿಯ ಕುಡ್ಲೆ ಬೀಚಿನ ಸಮುದ್ರದಲ್ಲಿ ಗುರುವಾರ ಅಲೆಯ ರಭಸಕ್ಕೆ ಕೊಚ್ಚಿ ಹೋಗಿ ನೀರಿನಲ್ಲಿ ಮುಳುಗುತ್ತಿದ್ದ ನಾಲ್ವರು ಕಾಲೇಜು ವಿದ್ಯಾರ್ಥಿಗಳನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ್ದಾರೆ.

ರಕ್ಷಿಸಲಾದವರನ್ನು ಉತ್ತರಪ್ರದೇಶದ ಕಾನ್ಪುರದ ತೇಜಸ್ವಿ ಬರ್ಜಿ ಮೋಹನ್ ಸಿಂಗ್ (21), ಬೀದರ್‌ನ ಕಮಲನಗರದ ನಿವಾಸಿ ಜಂ. ಉಮಾಕಾಂತ ವಸಮತಿ (20), ಬೆಳಗಾವಿಯ ನಿಶಾದ ರಾಘವೇಂದ್ರ ಕುಲಕರ್ಣಿ (20) ಹಾಗೂ ಬಿಹಾರ್‌ನ ಪಟ್ನಾದ ನಿಶಾನ್ ನೀನಾ (21) ಎಂದು ಗುರುತಿಸಲಾಗಿದೆ. ಎಲ್ಲರೂ ಬೆಂಗಳೂರಿನ ಪಿ.ಇ.ಎಸ್. ಕಾಲೇಜಿನ ವಿದ್ಯಾರ್ಥಿಗಳು.

ಒಟ್ಟು 11 ಜನ ಗುರುವಾರ ಗೋಕರ್ಣದ ಕುಡ್ಲೆ ಬೀಚಿಗೆ ಪ್ರವಾಸ ಬಂದಿದ್ದರು. ಎಲ್ಲರೂ ಸಮುದ್ರದಲ್ಲಿ ಸ್ನಾನಕ್ಕೆ ಇಳಿದಾಗ ಅಲೆ ಅಪ್ಪಳಿಸಿತು. ಅವರಲ್ಲಿ ನಾಲ್ವರು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿ ರಾಜು ಅಂಬಿಗ ಮತ್ತು ರಾಜೇಂದ್ರ ಕುರ್ಲೆ, 'ಪ್ರವಾಸಿ ಮಿತ್ರ' ಶೇಖರ ಹರಿಕಂತ್ರ ಹಾಗೂ ಕರಾವಳಿ ಕಾವಲು ಪಡೆಯ ನಾಗೇಂದ್ರ ನಾಲ್ವರನ್ನೂ ರಕ್ಷಿಸಿ ದಡಕ್ಕೆ ಕರೆ ತಂದರು. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಲೈಫ್ ಗಾರ್ಡ್ ಮೇಲ್ವಿಚಾರಕ ರವಿ ನಾಯ್ಕ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.